ಹಾಸನ, ಫೆ.26- ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕಾರೇಹಳ್ಳಿ ಬಳಿ ತಡರಾತ್ರಿ ನಡೆದಿದೆ.
ಯೋಗೇಶ್ಚಾರಿ (35), ಲಕ್ಷ್ಮಿ (28) ಹಾಗೂ ಲೋಕೇಶ್ನ ಸಹೋದರಿ ಮಕ್ಕಳಾದ , ಗಾನವಿ (12), ಲೇಖನಾ (4) ಮೃತಪಟ್ಟ ದುರ್ದೈವಿಗಳೆಂದು ಗುರುತಿಸಲಾಗಿದೆ.ಯೋಗೇಶ್ಚಾರಿ ಮೂಲತಃ ತಿಪಟೂರು ತಾಲೂಕಿನ ಎಡಗರಹಳ್ಳಿ ಗ್ರಾಮದವರಾಗಿದ್ದು, ಅನೇಕ ವರ್ಷಗಳಿಂದ ನವಿಲೆ ಗೇಟ್ ಬಳಿ ವಾಸವಾಗಿದ್ದರು.
ಯೋಗೇಶ್ಚಾರಿ ತನ್ನ ತಂಗಿ ಮಕ್ಕಳನ್ನು ತಮ್ಮ ಊರಿನಲ್ಲಿಯೇ ಸಾಕಿಕೊಂಡು ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ನಿನ್ನೆ ಹೊಸೂರಿಗೆ ಹೋಗಿದ್ದು, ಕೆಲಸ ಮುಗಿಸಿಕೊಂಡು ರಾತ್ರಿ ದ್ವಿಚಕ್ರ ವಾಹನದಲ್ಲಿ ವಾಪಸ್ ನವಿಲೆ ಗ್ರಾಮಕ್ಕೆ ಹಿಂದಿರುಗುವಾಗ ನುಗ್ಗೇಹಳ್ಳಿ-ತಿಪಟೂರು ರಸ್ತೆಯ ಕಾರೆಹಳ್ಳಿ ಬಳಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗಮನಿಸದೆ ಹಿಂದಿನಿಂದ ಟ್ರೈಲರ್ಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರಿಗೂ ಗಂಭೀರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಡೀಸೆಲ್ ಖಾಲಿಯಾದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ಅನ್ನು ಚಾಲಕ ಅಜಾಗರೂಕತೆಯಿಂದ ರಸ್ತೆ ಬದಿಯಲ್ಲೇ ಬಿಟ್ಟು ಹೋಗಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸುದ್ದಿತಿಳಿದ ಕೂಡಲೇ ನುಗ್ಗೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆಕ್ರಂಧನ: ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲುಮುಟ್ಟಿತ್ತು. ಇನ್ನೂ ಚಿಕ್ಕ ವಯಸ್ಸಿನಲ್ಲೇ ವಿ ಅವರನ್ನು ಕರೆದುಕೊಂಡಿದ್ದು, ಈ ದುರಂತ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದೆ.