ಹೊಸ ಟ್ರಾಫಿಕ್ ರೂಲ್ಸ್ : 24 ಗಂಟೆಯಲ್ಲಿ 41 ಲಕ್ಷ ದಂಡ ವಸೂಲಿ..!

Spread the love

ಬೆಂಗಳೂರು, ಸೆ.18- ಸಂಚಾರ ನಿಯಮ ಉಲ್ಲಂಘ ನೆಗೆ ದುಬಾರಿ ದಂಡ ಘೋಷಣೆಯಾಗಿ 15 ದಿನ ಕಳೆಯುತ್ತ ಬಂದರೂ ವಾಹನ ಸವಾರರು ಎಚ್ಚೆತ್ತುಕೊಳ್ಳದೆ ತಮ್ಮ ಜೇಬಿಗೆ ತಾವೇ ಕತ್ತರಿ ಹಾಕಿಕೊಳ್ಳುವ ಮೂಲಕ ದಂಡ ಕಟ್ಟುತ್ತಿದ್ದಾರೆ.

ನಿನ್ನೆ ಬೆಳಗ್ಗೆ 10 ಗಂಟೆಯಿಂದ ಇಂದು ಬೆಳಗ್ಗೆ 10 ಗಂಟೆವರೆಗೆ ಅಂದರೆ 24 ಗಂಟೆಯೊಳಗೆ ನಗರ ಸಂಚಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 11,855 ಪ್ರಕರಣಗಳನ್ನು ದಾಖಲಿಸಿಕೊಂಡು 41.19 ಲಕ್ಷ ರೂ. ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಿದ್ದಾರೆ.

ಪ್ರಮುಖವಾಗಿ ವಾಹನಗಳಿಂದ ಕಪ್ಪು ಹೊಗೆ ಹರಡಿ ಪರಿಸರಕ್ಕೆ ಹಾನಿಯುಂಟುಮಾಡುವ 103 ಪ್ರಕರಣಗಳು, ಪ್ರಮುಖ ದಾಖಲಾತಿ ಇಲ್ಲದಿರುವ 147 ಪ್ರಕರಣಗಳು, ಒಂದೇ ಬೈಕ್‍ನಲ್ಲಿ ಮೂವರ ಪ್ರಯಾಣ 114 ಪ್ರಕರಣಗಳು, ಸೀಟ್‍ಬೆಲ್ಟ್ ಹಾಕದ 263 ಪ್ರಕರಣಗಳು ಸೇರಿವೆ.

ಏಕಮುಖ ಸಂಚಾರ ಉಲ್ಲಂಘನೆ 229 ಪ್ರಕರಣ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ 413 ಪ್ರಕರಣ, ಸಮವಸ್ತ್ರ ಧರಿಸದ 436 ಪ್ರಕರಣ, ನೋ ಎಂಟ್ರಿ ರಸ್ತೆಯಲ್ಲಿ ಪ್ರಯಾಣಕ್ಕೆ 734 ಪ್ರಕರಣಗಳು ದಾಖಲಾಗಿವೆ.