ಬೆಂಗಳೂರು, ಫೆ.1- ಶೇ.50ರ ರಿಯಾಯಿತಿ ದರದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಿಕೊಳ್ಳುತ್ತಿರುವ ಸಂಚಾರಿ ಪೊಲೀಸರು ಜನರ ದಾರಿ ತಪ್ಪಿಸುತ್ತಿದ್ದಾರೆಯೇ ಎಂಬ ಅನುಮಾನ ಕಾಡತೊಡಗಿದೆ. ಈಗಾಗಲೇ ಹಲವಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ದಂಡವನ್ನು ಶೇ.50ರ ರಿಯಾಯಿತಿ ದರದಲ್ಲಿ ಪಾವತಿಸಿಕೊಂಡಿರುವ ಸಂಚಾರಿ ಪೊಲೀಸರಿಗೆ ಕೋಟ್ಯಂತರ ರೂ.ಗಳ ಸಂದಾಯವಾಗಿದೆ.
ಆದರೆ, ಪೊಲೀಸರು ವಸೂಲಿ ಮಾಡುತ್ತಿರುವ ದಂಡದ ಕ್ರಮ ಸರಿಯಾಗಿಲ್ಲ ಕಾನೂನಿಗೆ ವಿರುದ್ಧವಾಗಿ ದಂಡ ಸಂಗ್ರಹ ಮಾಡಲಾಗುತ್ತಿದೆ ಎಂದು ದಿ ವೀಲ್ಸ್ ಸಂಸ್ಥೆ ಆರೋಪಿಸಿದೆ.
BIG NEWS : ಬೆಂಗಳೂರಿನಲ್ಲಿ ಅಲ್‍ಖೈದಾ ಲಿಂಕ್ ಹೊಂದಿರುವ ಶಂಕಿತ ಉಗ್ರನ ಸೆರೆ
ದಂಡ ವಸೂಲಿಗೆ ಸೂಚನೆ ನೀಡಿದ್ದ ಕಾನೂನು ಪ್ರಾಕಾರ ಕೇವಲ ಆರು ತಿಂಗಳ ಒಳಗಿನ ದಂಡವನ್ನು ಮಾತ್ರ ಶೇ.50 ರ ರಿಯಾಯಿತಿ ದರದಲ್ಲಿ ವಸೂಲಿ ಮಾಡುವಂತೆ ನೀಡಿರುವ ಆದೇಶವನ್ನು ಸಂಚಾರಿ ಪೊಲೀಸರು ಉಲ್ಲಂಘಿಸಿ ಮನಸ್ಸೋಇಚ್ಚೆ ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ದಿ ವೀಲ್ಸ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಅಮರೇಶ್ ಆರೋಪಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ ಸಲೀಂ ಅವರಿಗೆ ಪತ್ರ ಬರೆದು ಆಗಿರುವ ಲೋಪವನ್ನು ಸರಿಪಡಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
500 ಹೊಸ ವಿಮಾನ ಖರೀದಿಸಲು ಮುಂದಾದ ಏರ್ ಇಂಡಿಯಾ
ಕಾನೂನು ಸೇವಾ ಪ್ರಾಕಾರದ ಆದೇಶದ ಪ್ರತಿಯೊಂದಿಗೆ ಸಲೀಂ ಅವರಿಗೆ ದೂರು ನೀಡಿರುವ ಅವರು ಈ ಕೂಡಲೇ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಆಗಿರುವ ಲೋಪದೋಷ ಸರಿಪಡಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
traffic police, fines, discount,