ಕೊರೊನಾ ಸೋಂಕು: 56 ಸ್ಥಳೀಯ ರೈಲ್ವೆ ಸೇವೆಗಳು ಸ್ಥಗಿತ

Spread the love

ಕೋಲ್ಕತ್ತಾ,ಏ.20- ಸಬರ್‍ಬನ್ ರೈಲು ಸೇವೆಯ 90 ಲೋಕೊಪೈಲೆಟ್‍ಗಳಿಗೆ ಕೊರೊನಾ ಸೋಂಕು ತಗುಲಿರುವುದರಿಂದ 56 ಸ್ಥಳೀಯ ರೈಲ್ವೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 90 ಲೋಕೋ ಪೈಲೆಟ್‍ಗಳು ಸೋಂಕಿಗೆ ಒಳಗಾಗುತ್ತಿದ್ದಂತೆ ರೈಲ್ವೆ ಚಾಲನೆ ಮಾಡುವವರ ಕೊರತೆ ಎದುರಾಗಿದೆ. ಹಾಗಾಗಿ ಹೆಚ್ಚು ಬೇಡಿಕೆ ಇಲ್ಲದ ಸಮಯ ಹಾಗೂ ಮಾರ್ಗಗಳ 56 ರೈಲು ಗಳ ಸೇವೆಗಳನ್ನು ರದ್ದುಗೊಳಿಸಿದ್ದೇವೆ ಎಂದು ರೈಲ್ವೆ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಕಾರಣದಿಂದಾಗಿ ಒಂದಷ್ಟು ದಿನ ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ನವೆಂಬರ್ 11ರಿಂದ ರೈಲ್ವೆ ಸೇವೆಯನ್ನು ಆರಂಭಗಿಳಿಸಲಾಗಿದೆ. ಆದರೆ, ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ಆತಂಕ ಎದುರಾಗಿದೆ.

ಮುನ್ನೆಚ್ಚರಿಕೆ ಕ್ರಮಗಳನ್ನು ಕಠಿಣವಾಗಿ ಜಾರಿಗೊಳಿಸಲು ರೈಲ್ವೆ ಅಕಾರಿಗಳು ನಿಲ್ದಾಣದ ಪ್ರಾಂಗಣದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ 500 ರೂ. ದಂಡ ವಿಸುವ ಘೋಷಣೆ ಮಾಡಿದ್ದಾರೆ. ಆದರೂ ಸೋಂಕು ಹರಡುವಿಕೆ ಕಡಿಮೆಯಾಗಿಲ್ಲ.

Facebook Comments