ಬೆಂಗಳೂರು,ಡಿ.12- ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಬೀದಿಗಿಳಿಯಲು ಸಾರಿಗೆ ನೌಕರರು ಸಜ್ಜಾಗಿದ್ದಾರೆ. ಬೇಡಿಕೆ ಈಡೇರಿಸುವ ಭರವಸೆ ನೀಡಿ ಮತ್ತೆ ಮಾತು ತಪ್ಪಿರುವ ಸರ್ಕಾರದ ವಿರುದ್ಧ ಮುಷ್ಕರದ ಅಸ್ತ್ರ ಪ್ರಯೋಗಿಸಲು ಸಾರಿಗೆ ನೌಕರರು ನಿರ್ಧರಿಸಿದ್ಧಾರೆ.
ಕೊಟ್ಟ ಮಾತು ತಪ್ಪಿರುವ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯ ವ್ಯಾಪಿ ಮುಷ್ಕರ ನಡೆಸುವುದಾಗಿ ಕೆಎಸ್ಆರ್‌ಟಿಸಿ ಸಾರಿಗೆ ನೌಕರರ ಸಂಘಟನೆ ಮುಖಂಡರು ತಿಳಿಸಿದ್ದಾರೆ.
ಲವ್ ಜಿಹಾದ್ ಪ್ರಕರಣಗಳ ತನಿಖೆಗೆ ವಿಶೇಷ ಶಾಖೆ ಸ್ಥಾಪಿಸುವಂತೆ ಆಗ್ರಹ
ಈಡೇರದ ನೌಕರರ ಬೇಡಿಕೆಗಳೇನು?
ಆರನೇ ವೇತನ ಆಯೋಗದ ಮಾದರಿಯಲ್ಲಿ ಶಿಫಾರಸು ಮಾಡಿ ಜಾರಿಗೊಳಿಸದೇ ಇರುವುದು, ವೈದ್ಯಕೀಯ ಸೌಲಭ್ಯಗಳನ್ನು ನೀಡದಿರುವುದು, ವಜಾಗೊಂಡ ನೌಕರರ ಮರು ನೇಮಕ ಮಾಡಿಲ್ಲ, ನಿವೃತ್ತಿ ಆಗಿ 30 ತಿಂಗಳು ಕಳೆದರೂ ಗ್ರಾಚ್ಯೂಟಿ ಹಣ ನೀಡಿಲ್ಲ,
ನೇಮಕಾತಿ ಅಕ್ರಮಗಳನ್ನು ತಡೆಯುವಂತೆ ಸಿಎಂ ಬೊಮ್ಮಾಯಿ ಖಡಕ್ ಸೂಚನೆ
ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡದೆ ಇರುವುದು, ಖಾಲಿ ಹುದ್ದೆಗಳ ನೇಮಕಾತಿ ಭರ್ತಿ ಮಾಡಿಲ್ಲ, ಕೆಎಸ್‍ಆರ್‍ಟಿಸಿ ಖಾಸಗೀಕರಣಕ್ಕೆ ಸರ್ಕಾರದ ಪ್ಲಾನ್ ಹಾಗೂ ಸಾರಿಗೆ ನೌಕರರ ಹಾಗು ಕುಟುಂಬ ಸದಸ್ಯರ ಮೇಲೆ ಹಾಕಿರೋ ಪೊಲೀಸ್ ಕೇಸ್ ಹಿಂಪಡೆಯದೇ ಇರೋದು ಕೆಎಸ್ಆರ್‌ಟಿಸಿ ನೌಕರರ ಪ್ರಮುಖ ಬೇಡಿಕೆಯಾಗಿದೆ.
Transport, #employees, #strike, #government, #pending, #demands, #ಕೆಎಸ್ಆರ್‌ಟಿಸಿ, #ಬಿಎಂಟಿಸಿ,