ತ್ರಿಪುರಾದಲ್ಲಿ ಬಿಜೆಪಿಗೆ ತಲೆನೋವಾದ ಟಿಎಂಪಿ

Social Share

ಗುವಾಹಟಿ,ಫೆ.11-ತ್ರಿಪುರಾದಲ್ಲಿ ಬಿಜೆಪಿಗೆ ಟಿಎಂಪಿ ಪಕ್ಷ ತಲೆನೋವಾಗಿ ಪರಿಣಮಿಸಿದೆ. ಸ್ಥಳೀಯ ಸಮುದಾಯಗಳಿಗೆ ಪ್ರತ್ಯೇಕ ತಿಪ್ರಾಲ್ಯಾಂಡ್ ರಾಜ್ಯ ರಚಿಸಬೇಕು ಎಂದು ಪಟ್ಟು ಹಿಡಿದಿರುವ ತಿಪ್ರಾ ಮೋಥಾ ಪಕ್ಷದ ಮುಖ್ಯಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ಅವರು ಮುಂಬರುವ ಚುನಾವಣೆಯಲ್ಲಿ ಕಿಂಗ್‍ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತ್ರಿಪುರಾ ಜನಸಂಖ್ಯೆಯ ಸುಮಾರು 32 ಪ್ರತಿಶತದಷ್ಟು ಇರುವ ಬುಡಕಟ್ಟು ಜನಾಂಗದವರನ್ನು ಪ್ರಚೋದಿಸುವ ಮೂಲಕ ದೇಬ್ ಬರ್ಮಾ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ಬಾಂಗ್ಲಾ ವಿಭಜನೆ ಸಂದರ್ಭದಲ್ಲಿ ಪೂರ್ವ ಬಂಗಾಳದ ಸಾವಿರಾರು ನಿರಾಶ್ರೀತರು ತ್ರಿಪುರದಲ್ಲಿ ನೆಲೆ ನಿಂತು ಬಲಿಷ್ಠರಾಗಿ ಬೆಳೆದಿದ್ದಾರೆ. ಅದರೆ, ಮೂಲ ಬುಡಕಟ್ಟು ಜನಾಂಗದವರು ಇನ್ನು ಕಾಡಿನಲ್ಲೇ ವಾಸಿಸುತ್ತಿದ್ದಾರೆ. ನಮ್ಮ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಬೇಕು ಎಂದು ಹೋರಾಟ ನಡೆಸುತ್ತಿರುವ ಬರ್ಮಾ ಅವರ ಟಿಎಂಪಿ ಪಕ್ಷ ಮುಂದಿನ ಚುನಾವಣೆಯಲ್ಲಿ ಸಾಕಷ್ಟು ಸ್ಥಾನ ಪಡೆದುಕೊಳ್ಳುವ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಕಳೆದ 8 ವರ್ಷದಿಂದ ದೇಶ ಶಾಂತಿಯುತವಾಗಿದೆ : ಅಮಿತ್ ಶಾ

ರಾಜ್ಯದ 20 ಮೀಸಲು ಬುಡಕಟ್ಟು ಸ್ಥಾನಗಳಲ್ಲಿ ಒಂದಾದ ಅಂಪಿನಗರದಲ್ಲಿ ಬುಬಾಗ್ರಾ ಎಂದು ಆದಿವಾಸಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಬರ್ಮಾ ಅವರಿಗೆ ಸಿಗುತ್ತಿರುವ ಅಭೂತಪೂರ್ವ ಸ್ವಾಗತ ಬಿಜೆಪಿ ಪಕ್ಷದ ನಿದ್ದೆಗೆಡಿಸಿರುವುದಂತೂ ಸತ್ಯ.

2019 ರಲ್ಲಿ ಕಾಂಗ್ರೆಸ್ ತೊರೆದು ತಿಪ್ರಾಹ ಸ್ಥಳೀಯ ಪ್ರಗತಿಶೀಲ ಪ್ರಾದೇಶಿಕ ಒಕ್ಕೂಟ ಎಂದೂ ಕರೆಯಲ್ಪಡುವ ತಿಪ್ರಾ ಮೋಥಾ ಪಕ್ಷವನ್ನು (ಟಿಎಂಪಿ) ರಚಿಸಿಕೊಂಡಿರುವ ಅವರು 2021 ರ ತ್ರಿಪುರಾ ಬುಡಕಟ್ಟು ಪರಿಷತ್ತಿನ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿದ್ದರು.

ಆದಿವಾಸಿಗಳಲ್ಲಿ ಪ್ರಭಾವಿಗಳಾಗಿದ್ದರೂ ಇತರ ಸಮುದಾಯಗಳು ತಮ್ಮ ಪಕ್ಷದಿಂದ ದೂರ ಹೋಗದಂತೆ ಎಚ್ಚರ ವಹಿಸಿರುವುದು ಅವರು ರಾಜಕೀಯ ನಡೆದ ಉದಾಹರಣೆಯಂತಿದೆ.

ಜನರಿಗೆ ಸರಿಯಾದ ಫಿಸಿಯೋಥೆರಪಿ ಶಿಕ್ಷಣ ಅಗತ್ಯ : ಪ್ರಧಾನಿ

ಬುಡಕಟ್ಟು ಜನಾಂಗದವರಿಗೆ ಹೆಚ್ಚಿನ ಸಾಂವಿಧಾನಿಕ ಹಕ್ಕಿನೊಂದಿಗೆ ಪ್ರತ್ಯೇಕ ರಾಜ್ಯವನ್ನು ರಚಿಸಬೇಕೆಂಬ ಅವರ ಟಿಪ್ರಾಲ್ಯಾಂಡ್ ಬೇಡಿಕೆಯು ಬಂಗಾಳಿ-ಬುಡಕಟ್ಟು ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ನೀವು ತಿಪ್ರಾಗೆ ಮತ ಹಾಕಿದರೆ, ನಿಮ್ಮ ಮತವು ಕಾಂಗ್ರೆಸ್ ಅಥವಾ ಸಿಪಿಐ(ಎಂ) ಗೆ ಹೋಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ರ್ಯಾಲಿಯೊಂದರಲ್ಲಿ ಹೇಳಿದ್ದರೂ ಕೆಲ ಬುಡಕಟ್ಟು ಸಮುದಾಯಗಳು ಬರ್ಮಾ ಬೆಂಬಲಕ್ಕೆ ನಿಂತಿರುವುದು ಎಲ್ಲೆಡೆ ಗೋಚರಿಸತೊಡಗಿದೆ.

Tribal Rights, Tripura, Party, Challenging, BJP,

Articles You Might Like

Share This Article