ರಾಂಚಿ,ಜ.7- ಜಾರ್ಖಾಂಡ್ನ ಗಿರಿದಿಃ ಜಿಲ್ಲೆಯ ಪಾಸ್ರ್ನಾಥ ಬೆಟ್ಟವನ್ನು ಬುಡಕಟ್ಟು ಸಮುದಾಯದ ಪವಿತ್ರತಾಣವನ್ನಾಗಿ ಉಳಿಸಬೇಕು ಎಂದು ಒತ್ತಾಯಿಸಿ ಆದಿವಾಸಿ ಸಮುದಾಯಗಳು ಜ.10ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಮೂಲಕ ಪಾಸ್ರ್ನಾಥಬೆಟ್ಟದ ವಿವಾದ ಮತ್ತೊಮ್ಮೆ ತಿರುಗು ಮರುಗಾಗಿದ್ದು ಸರ್ಕಾರಗಳು ಇಕ್ಕಟ್ಟಿಗೆ ಸಿಲುಕಿವೆ.
ಕೇಂದ್ರ ಸರ್ಕಾರ ಪಾಸ್ರ್ನಾಥಬೆಟ್ಟದಲ್ಲಿ ಪ್ರವಾಸೋದ್ಯಮದ ಎಲ್ಲಾ ಚಟುವಟಿಕೆಗಳಿಗೆ ತಡೆ ನೀಡಿದ ಮಾರನೆಯ ದಿನವೇ ಬುಡಕಟ್ಟು ಸಮುದಾಯದ ಹೊಸ ಬೇಡಿಕೆ ವ್ಯಕ್ತವಾಗಿದೆ. ಜಾರ್ಕಾಂಡ್ ರಾಜ್ಯ ಸರ್ಕಾರ ಪಾಸ್ರ್ನಾಥ ಬೆಟ್ಟವನ್ನು ಪ್ರವಾಸೋದ್ಯಮ ತಾಣವೆಂದು ಘೋಷಿಸಲು 2019ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಜೈನ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಪಾಸ್ರ್ನಾಥಬೆಟ್ಟ ಜೈನರ ಪವಿತ್ರ ತಾಣ, ಇದನ್ನು ಪ್ರವಾಸೋದ್ಯಮ ಕ್ಷೇತ್ರವೆಂದು ಪರಿಗಣಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಮತ್ತು ಮಾಂಸಾಹಾರ ಹಾಗೂ ಮದ್ಯ ಸೇವನೆಗೆ ಅವಕಾಶಗಳು ಸಿಗುತ್ತವೆ. ಇದರಿಂದ ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಲಿದೆ ಎಂದು ದೇಶಾದ್ಯಂತ ಜೈನ ಸಮುದಾಯ ಆತಂಕ ವ್ಯಕ್ತ ಪಡಿಸಿತ್ತು. ಒತ್ತಡ ತೀವ್ರವಾದ ಬಳಿಕ ಕೇಂದ್ರ ಸರ್ಕಾರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ತಡೆ ನೀಡಿತ್ತು.
ಧಾರ್ಮಿಕ ಶ್ರದ್ಧಾಕೇಂದ್ರ ಬದ್ರಿನಾಥ್ನ ಜೋಶಿಮಠಕ್ಕೆ ಕಾದಿದೆಯಾ ಅಪಾಯ..?
ಈಗ ವಿವಾದದ ಕಣಕ್ಕೆ ಬುಡಕಟ್ಟು ಸಮುದಾಯ ಧುಮಿಕಿದೆ. ಅಂತರಾಷ್ಟ್ರೀಯ ಸಂತಾಲ್ ಕೌನ್ಸಿಲ್ನ ಕಾರ್ಯಾಧ್ಯಕ್ಷ ನರೇಶ್ ಕುಮಾರ್ ಮುರ್ಮು ಪತ್ರಿಕಾಗೋಷ್ಟಿ ನಡೆಸಿ ಪಾಸ್ರ್ನಾಥಬೆಟ್ಟ ನಮ್ಮ ಸಮುದಾಯದ ಶಕ್ತಿದೇವತೆ ಮಾರಂಗ್ ಬುರುನ ನೆಲೆಯಾಗಿದೆ. ಈ ತಾಣವನ್ನು ಜೈನರ ಹಿಡಿತದಿಂದ ಬೇರ್ಪಡಿಸಿ ನಮ್ಮ ಸಮುದಾಯದ ವಶಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
1956 ಅಧಿಸೂಚನೆಯಲ್ಲಿನ ದಾಖಲೆಗಳ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆ ವೇಳೆಯಲ್ಲೇ ಬೆಟ್ಟವನ್ನು ಮಾರಂಗ್ಬುರು ಪ್ರದೇಶ ಎಂದು ದಾಖಲಿಸಲಾಗಿದೆ. ಈ ಹಿಂದೆ ನಡೆದ ಕಾನೂನು ಸಮರದಲ್ಲಿ ಜೈನ ಸಮುದಾಯ ಹಿನ್ನೆಡೆ ಅನುಭವಿಸಿದೆ ಎಂದು ಹೇಳಿದ್ದಾರೆ.
ಸಂಥಾಲ್ ಬುಡಕಟ್ಟು ಜಾರ್ಖಾಂಡ್, ಬಿಹಾರ, ಒಡಿಸ್ಸಾ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ನಿಸರ್ಗವನ್ನೇ ದೇವರೆಂದು ಪೂಜಿಸುವ ಪರಂಪರೆಯನ್ನು ಹೊಂದಿದೆ. ನಮಗೆ ಈವರೆಗೂ ಆಗಿರುವ ಅನ್ಯಾಯವನ್ನು ಸರ್ಕಾರಗಳು ಸರಿ ಪಡಿಸಬೇಕು. ಇಲ್ಲವಾದರೆ ಜನವರಿ 10ರಂದು ಸಾವಿರಾರು ಜನ ಪಾಸ್ರ್ನಾಥ ಬೆಟ್ಟದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು.
ಆಡಳಿತಾರೂಢ ಪಕ್ಷವಾಗಿರುವ ಜಾರ್ಖಾಂಡ್ಮುಕ್ತಿ ಮೋರ್ಚಾದ ಶಾಸಕ ಲೋಬಿನ್ ಹೆಂಬರಮ್ ಮಾತನಾಡಿ, ಕೇಂದ್ರ ಸರ್ಕಾರ ಜೈನರ ಪರವಾಗಿ ನಿರ್ಧಾರ ತೆಗೆದುಕೊಂಡಿದೆ. ಬೆಟ್ಟ ನಮ್ಮದು. ನಮಗೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದ್ದಾರೆ.
ಶಿಕ್ಷಕಿ ಮೇಲೆ ಗುಂಡು ಹರಿಸಿದ 6 ವರ್ಷದ ವಿದ್ಯಾರ್ಥಿ
ಬಿಜೆಪಿಯ ಮಾಜಿ ಸಂಸದ ಸಖ್ಲನ್ ಮುರ್ಮು, ವಿವಾದಕ್ಕೆ ಮುಖ್ಯಮಂತ್ರಿಯವರೆ ಕಾರಣ ಎಂದು ಆರೋಪಿಸಿದ್ದಾರೆ. ಆದಿವಾಸಿ ಸಮುದಾಯದಿಂದ ಬಂದಿರುವ ಮುಖ್ಯಮಂತ್ರಿ ಹೇಮಂತ್ ಸೂರೇನ್ ತಮ್ಮ ಸಮುದಾಯದ ಕಲ್ಯಾಣಕ್ಕೆ ಕೆಲಸ ಮಾಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಜಾರ್ಖಾಂಡ್ ಮುಕ್ತಿ ಮೋರ್ಚಾದ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಮಾತನಾಡಿ, ಬಿಜೆಪಿ ಪೂರ್ವನಿಯೋಜಿತವಾಗಿ ವಿವಾದವನ್ನುಹುಟ್ಟು ಹಾಕಿದೆ ಎಂದು ಆರೋಪಿಸಿದ್ದಾರೆ.
Tribal, step, demand, free, Parasnath hills, Jains,