ನವದೆಹಲಿ, ಫೆ.9- ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ನ್ಯಾಯಾಧಿಕರಣ ಇದುವರೆಗೆ 1,43,466 ಜನರನ್ನು ವಿದೇಶಿಯರೆಂದು ಘೋಷಿಸಿದೆ ಮತ್ತು ಅವರಲ್ಲಿ 329 ಜನರನ್ನು ಅವರ ಮೂಲ ದೇಶಗಳಿಗೆ ಗಡಿಪಾರು ಮಾಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಕರಣ ಒಟ್ಟು 1,21,598 ಮಂದಿಯನ್ನು ಭಾರತೀಯರು ಎಂದು ಘೋಷಿಸಿದೆ. ಅಸ್ಸಾಂನಲ್ಲಿ ಪ್ರಸ್ತುತ ನೂರಕ್ಕೂ ಹೆಚ್ಚು ನ್ಯಾಯಾಕರಣಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. 2021ರ ಡಿಸೆಂಬರ್ 31ವರೆಗೆ 1,23,829 ಪ್ರಕರಣಗಳು ಬಾಕಿ ಉಳಿದಿವೆ. 2021ರ ಡಿಸೆಂಬರ್ 31ರವರೆಗೆ 1,43,466 ಮಂದಿಯನ್ನು ವಿದೇಶಿಯರೆಂದು ಘೋಷಿಸಲಾಗಿದೆ. 2022ರ ಫೆಬ್ರವರಿ 1ರವರೆಗೆ ಒಟ್ಟು 329 ವ್ಯಕ್ತಿಗಳನ್ನು ಅವರ ಮೂಲ ದೇಶಗಳಿಗೆ ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಂಧನ ಕೇಂದ್ರಗಳು ಅಥವಾ ಶಿಬಿರಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಅಕಾರ ಮತ್ತು ಕಾರ್ಯಗಳನ್ನು ನಿಯೋಜಿಸಲಾಗಿದೆ ಎಂದು ರಾಯ್ ಹೇಳಿದರು.
