ನವದೆಹಲಿ,ಮಾ.8 – ಪಶ್ಚಿಮ ಬಂಗಾಳದ ಜಾನುವಾರು ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಟಿಎಮ್‍ಸಿ ನಾಯಕ ಅನುಬೃತ ಮೊಂಡಾಲ್ ಅವರನ್ನು ದೆಹಲಿ ಹೈಕೋರ್ಟ್ ಮಾ.10ರವರೆಗೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಪ್ಪಿಸಿದೆ.
ಮೊಡಾಲ್ ಅವರನ್ನು 14 ದಿನ ಕಸ್ಟಡಿಗೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ಅರ್ಜಿಯನ್ನು ಮಧ್ಯ ರಾತ್ರಿ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯ ವಿಚಾರಣೆ ಅಗತ್ಯವಿದೆ ಎಂದು ತಿಳಿಸಿ ಇಡಿಗೆ ಒಪ್ಪಿಸಿದೆ.
ತಂದೆ ನೀಚ ಕಾರ್ಯದ ಬಗ್ಗೆ ಹೇಳಿಕೆ ನೀಡಿರುವುದರಿಂದ ಮುಜುಗರವಿಲ್ಲ: ಖುಷ್ಬು
ಆರೋಪಿಯನ್ನು ವಿಚಾರಣೆ ನಡೆಸಿ, ಮಾ.10 ರಂದು ಕೋರ್ಟ್‍ನ ಮುಂದೆ ಹಾಜರುಪಡಿಸುವಂತೆ ವಿಶೇಷ ನ್ಯಾಯಾೀಧಿಶ ರಾಕೇಶ್ ಕುಮಾರ್ ಸೂಚಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಇಡಿಯು ಮೊಂಡಾಲ್ ಅವರನ್ನು ಕಸ್ಟಡಿಗೆ ಪಡೆದು, ಬಿಗಿ ಭದ್ರತೆಯೊಂದಿಗೆ ವಿಮಾನದಲ್ಲಿ ದೆಹಲಿಗೆ ಕರೆದೊಯ್ದಿದೆ.
ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಎಫ್‍ಐಆರ್ ದಾಖಲು
ಟಿಎಮ್‍ಸಿ ಜಿಲ್ಲಾ ಅಧ್ಯಕ್ಷನಾಗಿರುವ ಮೊಂಡಾಲ್ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನೆರ್ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು.
Trinamool, Leader, Sent, Custody, March 10, Cattle, Smuggling, Case,