ತ್ರಿಪುರಾದಲ್ಲಿ ಬಿಜೆಪಿ ಗೂಂಡಾಗಳಿಂದ 668 ಹಿಂಸಾಚಾರ ಪ್ರಕರಣ : ಸಿಪಿಐ

Social Share

ಗುವಾಹಟಿ,ಮಾ.6-ತ್ರಿಪುರಾದಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 668 ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಸಿಪಿಐ(ಎಂ) ಆರೋಪಿಸಿದೆ.

ರಾಜ್ಯದಲ್ಲಿ ನಡೆದ ಹಿಂಸಾಚಾರದಿಂದಾಗಿ ಇದುವರೆಗೂ ಮೂವರು ಸಾವನ್ನಪ್ಪಿದ್ದು, ಇತರ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಚುನಾವಣೆಯಲ್ಲಿ ಮೂರನೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಸಿಪಿಐ ದೂರಿದೆ.

ರಾಜ್ಯದಲ್ಲಿ ಗಲಭೆ ಸೃಷ್ಟಿಸುತ್ತಿರುವ ಕೋಮುವಾದಿಗಳು ರಬ್ಬರ್ ತೋಟಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಆಸ್ತಿಗಳನ್ನು ನಾಶಪಡಿಸಲಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ತಿಳಿಸಿದ್ದಾರೆ.

ಬಾಹುಬಲಿ-2 ದಾಖಲೆ ಮುರಿದ ಪಠಾಣ್

ರಾಜ್ಯದ ಪರಿಸ್ಥಿತಿ ಕುರಿತಂತೆ ಮಾಜಿ ಸಚಿವ ತಪನ್ ಚಕ್ರವರ್ತಿ ಮತ್ತು ಎಡ ಸಂಚಾಲಕ ನಾರಾಯಣ್ ಕರ್ ಅವರೊಂದಿಗೆ ತ್ರಿಪುರಾದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

2018 ರ ಮಾರ್ಚ್‍ನಲ್ಲಿ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನೆಯ ಆಳ್ವಿಕೆ ಬಂದಿತು ಮತ್ತು ಚುನಾವಣೆಯ ಕಾರಣ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅದು ಕೆಲವು ದಿನಗಳವರೆಗೆ ನಿಯಂತ್ರಣದಲ್ಲಿದೆ ಎಂದು ಚೌಧರಿ ಹೇಳಿದರು.

ಮಾರ್ಚ್ 2 ರಿಂದ ಸರಣಿ ದಾಳಿಯಿಂದಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಕಾಡಿನಲ್ಲಿ ಮತ್ತು ರಾಜ್ಯದ ಹೊರಗೆ ಆಶ್ರಯ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಲುಕ್‍ಔಟ್ ನೋಟಿಸ್

ಬಿಜೆಪಿಯ ಗೂಂಡಾಗಳು ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞಾಗಳನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಜನರ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅವರ ಮನೆ ಮತ್ತು ಆಸ್ತಿಗಳನ್ನು ಸುಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Tripura, CPI-M, says, 668 incidents, violence, BJP,

Articles You Might Like

Share This Article