ತುರಾ,ಮಾ.1- ಈಶಾನ್ಯ ಭಾಗದ ಮೂರು ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯದ ವಿಧಾನಸಭಾ ಚುನಾವಣೆಗಳಿಗೆ ನಡೆದ ಮತದಾನದ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು ಎಲ್ಲ ಕಡೆಗಳಲ್ಲಿ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಕಳೆದ ಫೆ.27ರಂದು ಮೇಘಾಲಯದ 59 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ. ಮತ ಎಣಿಕೆಗಾಗಿ ಚುನಾವಣಾ ಆಯೋಗ 13 ಮತ ಎಣಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನಾಳಿನ ಮತ ಎಣಿಕೆಗೆ ಸೂಕ್ತ ಬಂದೋಬಸ್ತ್ ಹಾಗೂ ವ್ಯವಸ್ಥೆ ಮಾಡಲಾಗಿದೆ ಎಂದು ಮೇಘಾಲಯದ ಮುಖ್ಯ ಚುನಾವಣಾ ಅಕಾರಿ ಎಫ್‍ಆರ್ ಖಾರ್ಕೊಂಗೊರ್ ತಿಳಿಸಿದ್ದಾರೆ.
ನಾವು ಎಲ್ಲಾ 12 ಜಿಲ್ಲೆಗಳಲ್ಲಿ ಮತ್ತು ಒಂದು ಉಪವಿಭಾಗದಲ್ಲಿ 13 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಮತ ಎಣಿಕೆಗೆ 27 ಎಣಿಕೆ ವೀಕ್ಷಕರು ಮತ್ತು 500 ಮೈಕ್ರೋ ಅಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ. ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಿಂಗಳಾರಂಭದಲ್ಲೇ ಶಾಕ್, ಎಲ್‌ಪಿಜಿ ದರ ಏರಿಕೆ, ಇಂದಿನಿಂದಲೇ ಜಾರಿ
11 ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಗರೋ ಹಿಲ್ಸï ಜಿಲ್ಲೆಯಲ್ಲಿ ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇವಿಎಂ ಸ್ಟ್ರಾಂಗ್ ರೂಂ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಬಂದೋಬಸ್ತ್ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಎಣಿಕೆ ಹಾಲ್‍ಗಳು ಸಿದ್ಧವಾಗಿವೆ ಮತ್ತು ಅಗತ್ಯವಿರುವ ಭದ್ರತಾ ಸಿಬ್ಬಂದಿ ಅಲ್ಲಿದ್ದಾರೆ ಎಂದು ವೆಸ್ಟ್ ಗರೊ ಹಿಲ್ಸï ಜಿಲ್ಲೆಯ ಡೆಪ್ಯುಟಿ ಕಮಿಷನರ್ ಸ್ವಪ್ನಿಲ್ ಟೆಂಬೆ ತಿಳಿಸಿದ್ದಾರೆ.
ಎಣಿಕೆ ಮಾಡುವವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಭದ್ರತೆಗಾಗಿ ಇಸಿಐನ ಪ್ರಮಾಣಿತ ಪ್ರೊಟೋಕಾಲ್ ಇದೆ ಮತ್ತು ಮೂರು ಹಂತದ ಭದ್ರತೆ ಇದೆ. ಪ್ರತಿ ಎಣಿಕೆ ಹಾಲ್‍ನಲ್ಲಿ ನಮ್ಮಲ್ಲಿ 10 ಟೇಬಲ್‍ಗಳಿವೆ ಮತ್ತು ಪ್ರತಿ ಟೇಬಲ್‍ಗೆ ಮೂರು ಜನರು ಮತ್ತು 11 ಅಸೆಂಬ್ಲಿಗಳಿರುತ್ತವೆ.
ವೀಕ್ಷಕರು, ಚುನಾವಣಾಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದು, ಯಾವುದೇ ಸಮಸ್ಯೆ ತಲೆದೋರಿಲ್ಲ ಎಂದರು.ಮೇಘಾಲಯದ ಜತೆಗೆ ತ್ರಿಪುರ, ನಾಗಾಲ್ಯಾಂಡ್ ರಾಜ್ಯಗಳಿಗೆ ನಡೆದ ಚುನಾವಣಾ ಫಲಿತಾಂಶವೂ ನಾಳೆ ಹೊರಬೀಳಲಿದೆ.
#Tripura, #Meghalaya, #Nagaland, #pollsResults2023 #ElectionResult2023,