ನ್ಯೂಯಾರ್ಕ್,ಮಾ. 19- ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ಬಂಧಿಸುವ ಸಂಚು ನಡೆದಿದೆ ಎಂದು ಹೇಳಿಕೊಂಡಿದ್ದು, ಒಂದು ವೇಳೆ ಅಂತಹ ಕ್ರಮಗಳಾದರೆ ದೇಶಾದ್ಯಂತ ರಿಪಬ್ಲಿಕ್ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ಈ ನಡುವೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ್ತೊಬ್ಬ ಅಭ್ಯರ್ಥಿ ಭಾರತೀಯ ಮೂಲದ ರಾಮಸ್ವಾಮಿ ಟ್ರಂಪ್‍ಗೆ ಬೆಂಬಲ ಸೂಚಿಸಿದ್ದಾರೆ. ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಪ್ರಕಟಿಸಿರುವ ಟ್ರಂಪ್, ಮಂಗಳವಾರ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ.
ಅಮಿತ್ ಶಾ ಭೇಟಿ ಮಾಡಿದ ರಮೇಶ ಜಾರಕಿಹೊಳಿ
ಇದರ ವಿರುದ್ಧ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು, ಅದಕ್ಕಾಗಿ ಹಣ ಸಂಗ್ರಹಿಸಬೇಕು ಎಂದು ಇ-ಮೇಲ್‍ಗಳನ್ನು ರವಾನಿಸಿದ್ದಾರೆ. ತಮ್ಮ ಪರವಾಗಿ ಹೇಳಿಕೆ ನೀಡುವಂತೆ ರಿಪಬ್ಲಿಕನ್ ಪಕ್ಷದ ಪ್ರಭಾವಿ ನಾಯಕರಿಗೆ ಒತ್ತಾಯಿಸಿದ್ದಾರೆ. ಆದರೆ ಟ್ರಂಪ್ ಬಂಧನದ ಬಗ್ಗೆ ಯಾವುದೇ ಸಂವಹನಗಳು ನಡೆದಿಲ್ಲ ಎಂದು ಅವರ ವಕೀಲರು ಮತ್ತು ವಕ್ತಾರರು ಸ್ಪಷ್ಟ ಪಡಿಸಿದ್ದಾರೆ.
ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಸಮಿತಿಯಿಂದ ಸೋರಿಕೆಯಾಗಿರುವ ಮಾಹಿತಿ ಆಧರಿಸಿ ತಾವು ಹೇಳುತ್ತಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ನೀಲ ಚಿತ್ರಗಳ ನಟಿ ಸ್ಟ್ರೋಮಿ ಡೇನಿಯಲ್ಸ್‍ಗೆ ಟ್ರಂಪ್ ಅಕ್ರಮವಾಗಿ ಹಣ ನೀಡಿದ್ದರು ಎಂಬ ಆರೋಪ ಇದೆ. ಇದನ್ನು ನ್ಯೂಯಾರ್ಕ್‍ನ ಮ್ಯಾನ್‍ಹ್ಯಾಟನ್ ಜಿಲ್ಲಾ ಸಮಿತಿ ತನಿಖೆ ನಡೆಸುತ್ತಿದೆ. ಅಟಾರ್ನಿ ಆಲ್ವಿನ್ ಬ್ರಾಗ್ ತನಿಖಾಧಿಕಾರಿಯಾಗಿದ್ದಾರೆ.
ತಾವು ಯಾವುದೇ ತಪ್ಪು ಮಾಡಿಲ್ಲ, ಬ್ರಾಗ್ ತನಿಖೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಟ್ರಂಪ್ ಆರೋಪಿಸಿದ್ದಾರೆ.
ಟ್ರಂಪ್ ಅವರ ಮಾಜಿ ವಕೀಲ ಫಿಕ್ಸರ್ ಮೈಕೆಲ್ ಕೊಹೆನ್ ಅವರು ಬುಧವಾರ ಗ್ರ್ಯಾಂಡ್ ಜ್ಯೂರಿ ಮುಂದೆ ತಮ್ಮ ಸಾಕ್ಷ್ಯವನ್ನು ದಾಖಲಿಸಿದರು. ಇದು ನಿರ್ಣಾಯಕ ಸಾಕ್ಷಿಯಾಗಿದೆ. 2018ರಲ್ಲಿ ಫೆಡರಲ್ ವಂಚನೆ ಮತ್ತು ಹಣಕಾಸು ಆರೋಪಗಳಿಗೆ ತಪ್ಪೋಪ್ಪಿಕೊಂಡಿದ್ದಾರೆ. ಟ್ರಂಪ್ ಡೇನಿಯಲ್ಸ್‍ಗೆ ಅಕ್ರಮವಾಗಿ 130,000 ಡಾಲರ್ ಹಣ ಪಾವತಿಸಿದ್ದಾರೆ ಮತ್ತು ಮರುಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸಾಬೀತು ಪಡಿಸಲು ಪೂರಕವಾಗಿ ಟ್ರಂಪ್ ಸಹಿ ಮಾಡಿದ ಚೆಕ್ ಅನ್ನು ತನಿಖಾ ಸಮಿತಿಗೆ ಮಾಜಿ ವಕೀಲರು ತೋರಿಸಿದ್ದಾರೆ.
ಕೋಲ್ಕತ್ತಾದಲ್ಲಿ ಶಾಸಕನ ಮೇಲೆ ಹಲ್ಲೆ
ತಾವು ಟ್ರಂಪ್ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸಿದ್ದೇನೆ ಎಂದು ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ರಂಪ್ ತಮ್ಮನ್ನು ಬಂಧಿಸಲು ಪ್ರಯತ್ನಗಳಾಗಿವೆ ಎಂದು ಹೇಳಿದ್ದು, ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ರಾಜಕೀಯ ಪ್ರಚೋದನೆಗೆ ಮುಂದಾಗಿದ್ದಾರೆ ಎಂಬ ಆರೋಪಗಳಿವೆ.
2017ರಿಂದ 2021ರವರೆಗೆ ಅಮೆರಿಕಾದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಡೋನಾಲ್ಡ್ ಟ್ರಂಪ್, 2021 ರ ಜನವರಿ 6 ರಂದು ಅಮೆರಿಕಾದ ರಾಜಧಾಣಿಯಲ್ಲಿ ದಂಗೆಯೇಳಲು ಇದೇ ಭಾಷೆಯನ್ನು ಟ್ರಂಪ್ ಬಳಸಿದ್ದರು. ಮುಂದಿನ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಯಸಿರುವ ಟ್ರಂಪ್, ರಾಜಕೀಯಕ್ಕಾಗಿ ತಮ್ಮನ್ನು ಜೈಲಿಗೆ ಕಳುಹಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಕಲಿ IPS ಅಧಿಕಾರಿ ಬಂಧನ : 36 ಲಕ್ಷ ಹಣ ಸೇರಿ 54 ಲಕ್ಷ ಮೌಲ್ಯದ ಮಾಲು ಜಪ್ತಿ
ಈ ನಡುವೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ, ಟ್ರಂಪ್‍ರನ್ನು ಬಂಧಿಸಿದರೆ ಅದು ಅಮೆರಿಕಾದ ಕಪ್ಪು ದಿನವಾಗಲಿದೆ ಎಂದಿದ್ದಾರೆ. ಜೋ ಬಿಡೇನ್ ಆಡಳಿತ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಪ್ರಯೋಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
Trump, says, will, arrested, Tuesday, supporters, protest,