ಡೊನಾಲ್ಡ್ ಟ್ರಂಪ್‌ ಹತ್ಯಗೆ ಮತ್ತೊಂದು ವಿಫಲ ಯತ್ನ, ಗುಂಡು ಹಾರಿಸಿದ ವ್ಯಕ್ತಿ ಅರೆಸ್ಟ್

ಫ್ಲೋರಿಡಾ,ಸೆ.16-ಇಲ್ಲಿನ ವೆಸ್ಟ್‌ ಪಾಮ್‌ ಬೀಚ್‌ನಲ್ಲಿರುವ ಗಾಲ್ಫ್ ಕ್ಲಬ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ಮೇಲೆ ಗುಂಡು ಹಾರಿಸಿ ಹತ್ಯಗೆ ಪ್ರಯತ್ನಿಸಲಾಗಿದೆ. ಅಮೆರಿಕ ಮಾಜಿ ಅಧ್ಯಕ್ಷರು ಮತ್ತೆ ಫ್ಲೋರಿಡಾದಲ್ಲಿ ದಾಳಿಗೆ ಒಳಗಾಗಿದ್ದಾರೆ ಎಂದು ಎಫ್‌ಬಿಐ ತಿಳಿಸಿದೆ.ಒಂಬತ್ತು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್‌ ಅವರ ಮೇಲೆ ದಾಳಿ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಅವರು ಪಾರಾಗಿದ್ದು , ಸುರಕ್ಷಿತವಾಗಿ ಆರೋಗ್ಯವಾಗಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ … Continue reading ಡೊನಾಲ್ಡ್ ಟ್ರಂಪ್‌ ಹತ್ಯಗೆ ಮತ್ತೊಂದು ವಿಫಲ ಯತ್ನ, ಗುಂಡು ಹಾರಿಸಿದ ವ್ಯಕ್ತಿ ಅರೆಸ್ಟ್