ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ : ಎಲಾನ್ ಮಸ್ಕ್

Social Share

ವಾಷಿಂಗ್ಟನ್,ನ.20-ಅಮಾನತುಗೊಂಡಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆ ಮರುಸ್ಥಾಪನೆ ಮಾಡಲಾಗುತ್ತದೆ ಎಂದು ಟ್ವಿಟರ್‍ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

ಕಳೆದ 2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಂದಲೆ ನಡೆಸಿದಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಟ್ರಂಪ್ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.

ಮಂಗಳೂರು ಆಟೋ ಸ್ಪೋಟ ಆಕಸ್ಮಿಕವಲ್ಲ, ಭಯೋತ್ಪಾದನಾ ಕೃತ್ಯ

ಈಗ ಪರಿಸ್ಥತಿ ಬದಲಾಗಿದೆ ಇದರ ಬೆನ್ನಲ್ಲೇ, ಟ್ರಂಪ್ ಖಾತೆ ಮರುಸ್ಥಾಪನೆ ಕುರಿತು ಜನಮತ ಆರಂಭಿಸಿದ್ದರು. ಇದಕ್ಕೆ ಶೇ.51.8ರಷ್ಟು ಜನರು ಟ್ರಂಪ್ ಟ್ವಿಟರ್ ಮರುಸ್ಥಾಪಿಸಬೇಕೆಂದು ಹಾಗೂ ಶೇ.48.2ರಷ್ಟು ಜನರು ಬೇಡ ಎಂದು ಪ್ರತಿಕ್ರಿಯೆ ನೀಡಿದ್ದರು.

3ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ

ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರೇ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಜನರು ತಮ್ಮ ಅಭಿಪ್ರಾಯದಂತೆ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

Trump, Twitter, account, reinstated,

Articles You Might Like

Share This Article