ಮ್ಯಾನ್ಮಾರ್ ನಾಗರಿಕ ಸಮರ ತಡೆಗಟ್ಟಿ : ವಿಶ್ವಸಂಸ್ಥೆಗೆ ಚೀನಾ ಮನವಿ

Social Share

ವಿಶ್ವಸಂಸ್ಥೆ,ಜ.29- ಬಿಕ್ಕಟ್ಟುಪೀಡಿತ ಮ್ಯಾನ್ಮಾರ್‍ನಲ್ಲಿ ಹೆಚ್ಚು ಹಿಂಸಾಚಾರ ಮತ್ತು ನಾಗರಿಕ ಸಮರ ಉಂಟಾಗದಂತೆ ನೋಡಿಕೊಳ್ಳುವುದು ವಿಸ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಥಮ ಗುರಿಯಾಗಬೇಕು ಎಂದು ವಿಶ್ವಸಂಸ್ಥೆಗೆ ಚೀನಾದ ರಾಯಭಾರಿ ಝಾಂಗ್ ಜುನ್ ಇಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ 10 ಸದಸ್ಯಬಲದ ಆಸಿಯಾನ್ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ನೂತನ ಮ್ಯಾನ್ಮಾರ್ ಪ್ರತಿನಿಧಿಗಳ ಹೇಳಿಕೆಗಳನ್ನು ರಹಸ್ಯ ಸಭೆಯಲ್ಲಿ ಆಲಿಸಿದ ಬಳಿಕ ಅವರ ಮತ್ತು ಇತರರ ಪ್ರಯತ್ನಗಳು ನಿಜವಾಗಿಯೂ ಸನ್ನಿವೇಶವನ್ನು ಶಾಂತಗೊಳಿಸುತ್ತವೆ ಎಂದು ಝಾಂಗ್ ಜುನ್ ತಿಳಿಸಿದರು.
ಬಹುತೇಕ ಒಂದು ವರ್ಷದ ಹಿಂದೆ (2021ರ ಫೆಬ್ರವರಿ 1) ಮ್ಯಾನ್ಮಾರ್‍ನ ಸೇನೆಯು ಆಂಗ್‍ಸಾನ್ ಸೂ ಕಿ ಅವರ ಚುನಾಯಿತ ಸರ್ಕಾರದಿಂದ ಅಧಿಕಾರವನ್ನು ಕಸಿದುಕೊಂಡಿತು.
ಇದನ್ನು ವಿರೋಧಿಸಿ ದೇಶದಾದ್ಯಂತ ಅಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಆದರೆ, ಭದ್ರತಾ ಪಡೆಗಳು ಬಲಪ್ರಯೋಗ ಮಾಡಿ ಪ್ರತಿಭಟನೆಗಳನ್ನು ಹತ್ತಿಕ್ಕಿದವು. ಈ ಸಂಘರ್ಷದಲ್ಲಿ 1400ಕ್ಕೂ ಅಧಿಕ ಮಂದಿ ಪ್ರಾಣತೆತ್ತರು ಎಂದು ರಾಜಕೀಯ ಖೈದಿಗಳಿಗಾಗಿನ ನೆರವು ಸಂಘ ಸಂಕಲನ ಮಾಡಿರುವ ಸವಿವರಪಟ್ಟಿ ತಿಳಿಸಿದೆ.
ತರುವಾಯ ಮ್ಯಾನ್ಮಾರ್‍ನಲ್ಲಿ ಸಶಸ್ತ್ರ ಬಂಡಾಯ ಸಹ ಅಭಿವೃದ್ಧಿಯಾಗಿದೆ. ಇದು ನಾಗರಿಕ ಸಮರಕ್ಕೆ ನಾಂದಿಯಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

Articles You Might Like

Share This Article