ಕನ್ನಡ ಅನುಷ್ಠಾನ ವಿಧೇಯಕ ಯಥಾವತ್ ಜಾರಿಗೆ ನಾಗಾಭರಣ ಒತ್ತಾಯ

Social Share

ಬೆಂಗಳೂರು, ಅ.11- ಕನ್ನಡ ಅನುಷ್ಠಾನಕ್ಕಾಗಿ ರೂಪಿಸಲಾಗಿರುವ ವಿಧೇಯಕವನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಉಳಿಸಲು ಏನು ಮಾಡಬೇಕು ಎಂಬ ಕುರಿತು ಪ್ರಾಧಿಕಾರ ಒಂದು ವರ್ಷದಿಂದ ಅಧ್ಯಯನ ನಡೆಸಿದೆ. ಅದರ ಆಧಾರದ ಮೇಲೆ ವಿಧೇಯಕ ರೂಪಿಸಲಾಗಿದೆ. ಕರಡು ವಿಧೇಯಕವನ್ನ ಕನ್ನಡ ಸಂಸ್ಕೃತಿ ಇಲಾಖೆಗೆ ನೀಡಲಾಗಿತ್ತು

. ಅಲ್ಲಿಯೂ ಸಭೆಗಳನ್ನು ನಡೆಸಲಾಗಿದೆ. ಆದರೆ ಕನ್ನಡ ಸಂಸ್ಕøತಿ ಇಲಾಖೆಯಿಂದಲೇ ಆಕ್ಷೇಪಗಳು ಕೇಳಿ ಬಂದಿವೆ. ಹೊಸ ನಿಯಮ ರಚನೆಯ ವೇಳೆ ಈ ರೀತಿಯ ಅಪಸ್ವರಗಳು ಸಾಮಾನ್ಯ. ಇದೆಲ್ಲದರ ಹೊರತಾಗಿಯೂ ವಿಧೇಯಕ ಜಾರಿಯಾಗಬೇಕು ಎಂದರು.

ಎಲ್ಲರ ಅಭಿಪ್ರಾಯ ಕ್ರೋಢಿಕರಿಸಿಯೇ ವಿಧೇಯಕ ರೂಪಿಸಲಾಗಿದೆ. ಶೀಘ್ರವೇ ಅಂಗೀಕಾರಗೊಂಡು ಕಾನೂನು ಜಾರಿಯಾಗಲಿ ಎಂಬುದು ನಮ್ಮ ಕನಸು. ಸದನದಲ್ಲಿ ಕರಡು ವಿಧೇಯಕ ಮಂಡನೆಯಾಗಿದೆ. ವಿಧೇಯಕ ತಂದರೆ ಮಾತ್ರ ಕನ್ನಡ ಉಳಿವು ಸಾಧ್ಯವಿದೆ. ಹಾಗಾಗಿ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಚರ್ಚೆಯಾಗಿ ಅಂಗೀಕಾರಗೊಳ್ಳಲಿ ಎಂದು ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಕಲಿ ಅಧಿನಿಯಮ ಪಾಲನೆ ಮಾಡಲಾಗಿದೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಪಾಲಿಸುತ್ತಿರಲಿಲ್ಲ, ಸಿಬಿಎಸ್‍ಸಿ, ಐಸಿಎಸ್‍ಸಿ ಶಾಲೆಗಳ ಮುಖ್ಯಸ್ಥರ ಜೊತೆ ಚರ್ಚೆಸಲಾಯಿತು. ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಯಿತು. ಈಗ ಎಲ್ಲಾ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಹೊರಗಿನಿಂದ ಬಂದವರಿಗೂ ಕನ್ನಡ ಕಲಿಸುವ ಪ್ರಯತ್ನ ನಡೆಸಲಾಗಿದೆ.

ಅಲ್ಲಲ್ಲಿ ಕೆಲ ಹಿನ್ನಡೆಗಳಾಗಿದ್ದರೂ, ಕನ್ನಡ ಕಡ್ಡಾಯ ಎಂಬದನ್ನು ಜಾರಿ ಮಾಡಲಾಗಿದೆ ಎಂದರು.
2021 ರ ಫೆಬ್ರವರಿಯಲ್ಲಿ ಬಲಿಷ್ಠ ಭಾರತ ಎನ್ನುವ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿತ್ತು. ಅದರಲ್ಲಿ 22 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕನ್ನಡದ ಬಗ್ಗೆ ಸಂವಾದ ನಡೆಸಲಾಯಿತು.

ಶಿಕ್ಷಣದಲ್ಲಿ ಕನ್ನಡ ಊರ್ಜಿತವಾಗಬೇಕು, ಎಲ್ಲಾ ಭಾಷೆಗಳಿಗೆ ಸಮಾನ ಅವಕಾಶ ಸಿಗಬೇಕು. ಶಿಕ್ಷಣ, ಉದ್ಯೋಗದಲ್ಲಿ ಕನ್ನಡ ಬಳಕೆಯಾಗಬೇಕು. ಇಲಾಖೆಯಲ್ಲಿ ಕನ್ನಡ ಕನ್ನಡ ಕಡ್ಡಾಯವಾಗಬೇಕು. ಕೆಲವು ಕಡೆ ಕನ್ನಡ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಸಂಬಂಧಪಟ್ಟ ಇಲಾಖೆಗೆ 180 ಪತ್ರಗಳನ್ನು ಬರೆಯಲಾಗಿದೆ. ಆ ಇಲಾಖೆಗಳಿಂದ ಸಮರ್ಪಕ ಉತ್ತರ ಬಂದಿಲ್ಲ. ವ್ಯವಸ್ಥೆಯಲ್ಲಿಯೇ ಕೆಲ ಸಮಸ್ಯೆಗಳಿವೆ. ಈ ಮೂಲ ಸಮಸ್ಯೆಗಳನ್ನು ಮೊದಲು ಸರಿಪಡಿಸಬೇಕಿದೆ ಎಂದರು.

ಕನ್ನಡ ಕಡ್ಡಾಯಗೊಳಿಸಲು ಅಧಿಕಾರಿಗಳಲ್ಲಿ ಇಚ್ಚಾಶಕ್ತಿ ಇರಬೇಕು. ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ದೊಡ್ಡ ದಂಡೆ ಇದೆ. ಅವರಲ್ಲಿ ಬಹಳಷ್ಟು ಮಂದಿ ತಮ್ಮ ಪತ್ರ ಆಧರಿಸಿ ಕನ್ನಡ ನಿರ್ಲಕ್ಷ್ಯಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕೆಲಸ ಮಾಡಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು.

Articles You Might Like

Share This Article