ಬುದ್ಧಿಮಾತು ಹೇಳಿದ ಟಿಟಿ ಚಾಲಕನ ಇರಿದು ಕೊಲೆ

Social Share

ಬೆಂಗಳೂರು, ಜ.15- ಮನೆಗೆ ಸರಿಯಾಗಿ ಹೋಗದ ಸಂಬಂಗೆ ಬುದ್ಧಿಮಾತು ಹೇಳಿದ ಟಿಟಿ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಟಿಟಿ ಚಾಲಕ ಕೇಶವಮೂರ್ತಿ (32) ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಸ್ನೇಹಿತ ಕಲ್ಲೇಶ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊಲೆ ಆರೋಪಿ ಹಾಗೂ ಗಾರ್ಮೆಂಟ್ಸ್ ಉದ್ಯೋಗಿ ಭರತ್ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಘಟನೆ ವಿವರ: ಕೇಶವಮೂರ್ತಿ ಹಾಗೂ ಭರತ ಸಂಬಂಗಳು. ಇತ್ತೀಚೆಗೆ ಭರತನ ಪತ್ನಿ ನನ್ನ ಪತಿ ಸರಿಯಾಗಿ ಮನೆಗೆ ಬರುತ್ತಿಲ್ಲ, ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಕೇಶವಮೂರ್ತಿ ಬಳಿ ಹೇಳಿದ್ದರು.
ಇದಕ್ಕೆ ಕೇಶವಮೂರ್ತಿ ಸಮಾಧಾನ ಹೇಳಿ ಆಕೆಯನ್ನು ಕಳುಹಿಸಿದ್ದರು. ಕಳೆದ ಶುಕ್ರವಾರ ರಾಜಗೋಪಾಲನಗರದಲ್ಲಿ ಕೇಶವಮೂರ್ತಿ ಮತ್ತು ಕಲ್ಲೇಶ್ ಹೋಗುತ್ತಿದ್ದಾಗ ಭರತ್ ಸಿಕ್ಕಿದ್ದಾನೆ.

ತಕ್ಷಣ ಕೇಶವಮೂರ್ತಿ ಆತನನ್ನು ತಡೆದು ನೀನು ಹೀಗೆ ಮಾಡಿದರೆ ಹೇಗೆ? ಮನೆಗೆ ಹೋಗದೆ ನಿನ್ನ ಪತ್ನಿಗೆ ನೋವು ಕೊಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದಾನೆ.

ನಂತರ ಕೇಶವಮೂರ್ತಿ , ಕಲ್ಲೇಶ್, ಭರತ್ ಮೂವರು ಒಂದೇ ಬೈಕ್ನಲ್ಲಿ ಚಿಕ್ಕಬಾಣಾವಾರದ ಚಿಗರಿ ವೈನ್ಸ್ ಸ್ಟೋರ್ ಹತ್ತಿರ ಬಂದು ಕುಡಿದು ಹೊರಗೆ ಬಂದಿದ್ದಾರೆ. ಪುನಃ ಕೇಶವಮೂರ್ತಿ ಭರತನಿಗೆ ಬುದ್ಧಿವಾದ ಹೇಳಿ ರೇಗಿದಾಗ ಕೆರಳಿದ ಭರತ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಇಬ್ಬರಿಗೂ ಇರಿದು ಪರಾರಿಯಾಗಿದ್ದಾನೆ.

ತೀವ್ರ ಇರಿತಕ್ಕೊಳಗಾದ ಕುಸಿದು ಬಿದ್ದ ಕೇಶವಮೂರ್ತಿ ಹಾಗೂ ಕಲ್ಲೇಶನನ್ನು ಸ್ಥಳೀಯರು ನೋಡಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ನಿನ್ನೆ ಮಧ್ಯಾಹ್ನ ಕೇಶವಮೂರ್ತಿ ಕೊನೆಯುಸಿರೆಳೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಭರತನಿಗಾಗಿ ಶೋಧ ನಡೆಸುತ್ತಿದ್ದಾರೆ.

#Bengaluru, #Murder,

Articles You Might Like

Share This Article