ತಿರುಪತಿ, ಜೂ.2- ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮೂರು ವರ್ಷಗಳ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದ ನಂತರ ಬೇಸಿಗೆ ಸಂದರ್ಭದಲ್ಲಿ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದು, ದೇವರ ದರ್ಶನದಲ್ಲಿ ಭಾರೀ ವಿಳಂಬವಾಗುತ್ತಿರುವ ಕಾರಣ, ದರ್ಶನ ನಿಯಮಗಳಲ್ಲಿ ಬದಲಾವಣೆ ಮಾಡಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದ್ದು, ಜೂನ್ 30ರವರೆಗೂ ಹೊಸ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಟೋಕನ್ ಇಲ್ಲದೆ ಉಚಿತ ದರ್ಶನ ಮಾಡುವ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ದರ್ಶನ ಸಿಗಲು ಸುಮಾರು 30-40 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ ಎಂದು ಟಿಟಿಡಿ ಹೇಳಿದೆ. ಆದ್ದರಿಂದ ಜೂನ್ 30 ರವರೆಗೆ ವಿಐಪಿ ದರ್ಶನ ಮತ್ತು ಆರ್ಜಿತ ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ.
ಹೊಸ ನಿಯಮದ ಪ್ರಕಾರ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸುಪ್ರಭಾತ ಸೇವೆಯಲ್ಲಿನ ವಿವೇಚನಾ ಕೋಟಾವನ್ನು ಟಿಟಿಡಿ ಹಿಂಪಡೆದಿದ್ದು, ಸಾಮಾನ್ಯ ಭಕ್ತರಿಗೆ 20 ನಿಮಿಷಗಳ ಉಳಿತಾಯವಾಗಲಿದೆ.
ಗ್ಯಾರಂಟಿ ಯೋಜನೆಗಳಿಗೆ ಕಂಟಕವಾಗಲಿದೆಯೇ ಸುಪ್ರೀಂ ತೀರ್ಪು?
ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ ಆದರೆ ಸ್ವಯಂ-ವಿಐಪಿಗಳಿಗೆ ಮಾತ್ರ ದರ್ಶನವನ್ನು ಅನುಮತಿಸಲಾಗಿದೆ, ಇದು ಈ ದಿನಗಳಲ್ಲಿ ಪ್ರತಿ ದಿನ 3 ಗಂಟೆಗಳ ದರ್ಶನ ಸಮಯವನ್ನು ಉಳಿಸುತ್ತದೆ ಎಂದು ಟಿಟಿಡಿ ಹೇಳಿದೆ. ಗುರುವಾರದಂದು ಏಕಾಂತಂನಲ್ಲಿ ತಿರುಪ್ಪವಾಡ ಸೇವೆ ಮಾಡಲು ಟಿಟಿಡಿ ನಿರ್ಧರಿಸಿದೆ, ಇದರಿಂದಾಗಿ 30 ನಿಮಿಷಗಳ ಉಳಿತಾಯವಾಗುತ್ತದೆ.
ಸಾಮಾನ್ಯ ಭಕ್ತರು ದೀರ್ಘಕಾಲದವರೆಗೆ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ತ್ವರಿತ ಮತ್ತು ಆರಾಮದಾಯಕವಾಗಿ ದೇವರ ದರ್ಶನವನ್ನು ಮಾಡುವಂತೆ ಅವಕಾಶ ನೀಡುವ ದೃಷ್ಟಿಯಿಂದ ಈ ನಿರ್ಧಾರಗಳನ್ನು ಜಾರಿ ಮಾಡಲಾಗಿದೆ ಎಂದು ಟಿಟಿಡಿ ತಿಳಿಸಿದೆ.
ಸಹಕರಿಸುವಂತೆ ಟಿಟಿಡಿ ಮನವಿ ಎಲ್ಲಾ ಭಕ್ತಾದಿಗಳು ಮತ್ತು ವಿಐಪಿಗಳು ಸಹಕರಿಸಬೇಕು ಮತ್ತು ಎಲ್ಲಾ ಭಕ್ತರಿಗೆ ಆರಾಮದಾಯಕವಾಗಿ ದೇವರ ದರ್ಶನ ಮಾಡಲು ಅವಕಾಶ ನೀಡಬೇಕೆಂದು ಟಿಟಿಡಿ ಮನವಿ ಮಾಡಿದೆ.
ಗ್ಯಾರಂಟಿ ಒತ್ತಡದಲ್ಲಿ ಸಿಎಂ ಸಿದ್ದು: ಚರ್ಚೆಗೆ ಗ್ರಾಸವಾದ ಅನಗತ್ಯ ನೇಮಕಾತಿ
ಟಿಟಿಡಿ ವೆಬ್ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಸದ್ಯಕ್ಕೆ ತಿರುಮಲದಲ್ಲಿ ಮೂರು ಪೂಜೆಗಳನ್ನು ನಡೆಸಲಾಗುತ್ತದೆ. ಬೆಳಿಗ್ಗೆ ಸಾರ್ವಜನಿಕರು ನೋಡಬಹುದಾದ ತೋಮಾಳ ಸೇವೆ, ಮಧ್ಯಾಹ್ನದ ಸಮಯದಲ್ಲಿ ಸಂಕ್ಷೇಪಿತ ಪೂಜೆ ಮತ್ತು ರಾತ್ರಿಯಲ್ಲಿ ಕಟ್ಟುನಿಟ್ಟಾಗಿ ನಡೆಯುವ ಖಾಸಗಿ ಪೂಜೆ, ಇದರಲ್ಲಿ ದೇವಸ್ಥಾನದ ಅರ್ಚಕರು, ಪರಿಚಾರಕರು ಮತ್ತು ಆಚಾರ್ಯ ಪುರುಷರು ಮಾತ್ರ ಭಾಗವಹಿಸುತ್ತಾರೆ.
TTD, #announces, #newrules, #waiting, #Thimmappa, #Darshan,