ತಿರುಪತಿ ದೇವಸ್ಥಾನದಲ್ಲಿ ದರ್ಶನ ನಿಯಮಗಳ ಬದಲಾವಣೆ

Social Share

ಅಮರಾವತಿ, ಅ.30- ನವೆಂಬರ್ ತಿಂಗಳಿನಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ದರ್ಶನದ ನಿಯಮಗಳಲ್ಲಿ ಬದಲಾವಣೆಯಾಗಿದೆ. ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಬದಲಾವಣೆ ತಂದಿದ್ದು, ವಿಐಪಿ ದರ್ಶನ ಮತ್ತು ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಭಕ್ತರಿಗೆ ತೊಂದರೆ ಆಗುತ್ತಿತ್ತು. ಉಚಿತ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.

ನವೆಂಬರ್ 1ರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ಮುಂಜಾನೆ 2.30ರಿಂದ ಬೆಳಗ್ಗೆ 8ರ ತನಕ ವಿಐಪಿ ದರ್ಶನವಿದೆ. ಆದರೆ ಕೆಲವು ದಿನ ವಿಐಪಿ ದರ್ಶನ 10 ಗಂಟೆಯ ತನಕವೂ ಸಾಗುತ್ತಿತ್ತು, ಉಚಿತ ದರ್ಶನಕ್ಕೆ ಬರುವ ಭಕ್ತರು ಕಾಯಬೇಕಿತ್ತು.

ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಐಪಿ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಈ ಬದಲಾವಣೆ ಮಾಡಿ, ಬಳಿಕ ಮುಂದುವರೆಸುವ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಪತ್ರಕರ್ತರಿಗೆ ಆಮಿಷವೊಡ್ಡುವ ಕೆಲಸ ಮಾಡಿಲ್ಲ : ಸಿಎಂ ಸ್ಪಷ್ಟನೆ

ಈ ಕುರಿತಾಗಿ ಸರಣಿ ಸಭೆಗಳನ್ನು ನಡೆಸಲಾಗಿದೆ. ಉಚಿತ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆಗುವ ತೊಂದರೆ ನಿವಾರಿಸಲು ನವೆಂಬರ್‍ನಿಂದ ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಲು ಸೂಚನೆ ಟಿಟಿಡಿ ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ನೀಡಿದ್ದರು.

ಮುಂಜಾನೆ 8 ಗಂಟೆಗೆ ಮುಗಿಯಬೇಕಿದ್ದ ವಿಐಪಿ ದರ್ಶನ ಕೆಲವು ದಿನ 10 ಗಂಟೆಯ ತನಕ ಸಾಗುತ್ತಿತ್ತು. ಇದರಿಂದಾಗಿ ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಆಗುತ್ತಿತ್ತು. ಅಲ್ಲದೇ ಅರ್ಜಿತ ಸೇವೆ ವೀಕ್ಷಿಸಲು ಸಹ ಸಾಧ್ಯವಾಗುತ್ತಿರಲಿಲ್ಲ.

ವಿಐಪಿ ದರ್ಶನ ಮುಗಿಯುವ ತನಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‍ನಲ್ಲಿರುವ ಉಚಿತ ದರ್ಶನದ ಭಕ್ತರು ತಾಸುಗಟ್ಟಲೇ ಕಾಯಬೇಕಿತ್ತು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಟಿಟಿಡಿ ಪ್ರಾಯೋಗಿಕ ಬದಲಾವಣೆ ಮಾಡುತ್ತಿದೆ.

ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಿ, ಉಚಿತ ದರ್ಶನದ ಭಕ್ತರಿಗೆ ಅನುಕೂಲ ಮಾಡಿಕೊಡುವ ಪ್ರಸ್ತಾವನೆಯನ್ನು ಎ. ವಿ. ಧರ್ಮರೆಡ್ಡಿ ಅವರು ಮುಂದಿಟ್ಟಿದ್ದರು. ಟಿಟಿಡಿ ಸಭೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದ್ದು, ನವೆಂಬರ್‍ನಿಂದಲೇ ಇದು ಜಾರಿಗೆ ಬರಲಿದೆ.

ದಕ್ಷಿಣ ಕೊರಿಯಾ : ಹ್ಯಾಲೋವೀನ್ ಹಬ್ಬದ ವೇಳೆ ಕಾಲ್ತುಳಿತದಿಂದ 151 ಮಂದಿ ಸಾವು..!

ಪ್ರತಿದಿನ ಮಧ್ಯಾಹ್ನದ ಒಳಗೆ ವಿಐಪಿ ದರ್ಶನ ಪೂರ್ಣಗೊಳಿಸಲು ಟಿಟಿಡಿ ಯೋಜನೆ ರೂಪಿಸಿದೆ. ಸಾಮಾನ್ಯ ದರ್ಶನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸಮಯವನ್ನು ನೀಡಲಿದೆ. ಟಿಟಿಡಿ ಸರ್ವದರ್ಶನದಲ್ಲಿಯೂ ಕೆಲವು ಬದಲಾವಣೆ ಮಾಡಲು ಯೋಜಿಸುತ್ತಿದೆ.

Articles You Might Like

Share This Article