ತುಮಕೂರು : ಮಹಿಳೆಗೆ ಚಿಕಿತ್ಸೆ ನೀಡದ ನಾಲ್ವರು ಅಧಿಕಾರಿಗಳು ಅಮಾನತು

Social Share

ಬೆಂಗಳೂರು,ನ.4-ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಶಿಶುಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ.

ಸ್ತ್ರೀ ಮತ್ತು ಪ್ರಸೂತಿರೋಗ ತಜ್ಞರಾದ ಡಾ.ಉಷಾ.ಎ.ಆರ್, ಶುಶ್ರಷಾಧಿಕಾರಿಗಳಾದ ಯಶೋಧ.ಬಿ.ವೈ, ಸವಿತ ಮತ್ತು ದಿವ್ಯಾ ಭಾರತಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಪಡಿಸಲಾಗಿದೆ.

ಮೇಲ್ನೋಟಕ್ಕೆ ಕರ್ತವ್ಯ ನಿರ್ವಹಣೆಯಲ್ಲಿ ಈ ನಾಲ್ವರು ಲೋಪ ವೆಸಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಅಮಾನತುಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಹೇಳಿದ್ದಾರೆ.

ಸೇವೆಯಿಂದ ಅಮಾನತುಗೊಂಡಿರುವ ನಾಲ್ವರಿಗೆ ಅಮಾನತಿನ ಸಂದರ್ಭದಲ್ಲಿ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಲೀನ್‍ನನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಖಾಲಿ ಇರುವ ಹುದ್ದೆಗಳಿಗೆ ಸ್ಥಳಾಂತರಿಸಲಾಗಿದೆ.

AIOSEO Settings

ಸಕ್ಷಮ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಟ್ಟು ತೆರಳಬಾರದೆಂದು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

Articles You Might Like

Share This Article