ಗರ್ಭಿಣಿ ಮತ್ತು ಅವಳಿ ಮಕ್ಕಳ ಸಾವು : ರಾಜಕೀಯ ಒತ್ತಡಕ್ಕೆ ವೈದ್ಯೆ ಅಮಾನತು..?

Social Share

ತುಮಕೂರು, ನ.6- ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದಿಂದ ಗರ್ಭಿಣಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣದಲ್ಲಿ ವೈದ್ಯೆಯ ಪಾತ್ರವಿಲ್ಲದಿದ್ದರೂ ವಿನಾಕಾರಣ ಅಮಾನತು ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಬಗ್ಗೆ ಅಮಾನತುಗೊಂಡಿರುವ ವೈದ್ಯೆ ಡಾ.ಉಷಾ ಸರ್ಕಾರಿ ವೈದ್ಯಾಧಿಕಾರಿ ಗಳ ಸಂಘಕ್ಕೆ ಪತ್ರ ಬರೆದಿದ್ದು, ರಾಜಕೀಯ ಒತ್ತಡಗಳನ್ನು ತಪ್ಪಿಸಿಕೊಳ್ಳಲು ನನ್ನನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನ.5ರಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ತುಮಕೂರು ಜಿಲ್ಲಾಧ್ಯಕ್ಷರಿಗೆ ಈ ಕುರಿತು ಪತ್ರ ಬರೆದಿರುವ ಡಾ.ಉಷಾ, ನ.2ರಂದು ಬೆಳಗ್ಗೆ 9.30 ರಿಂದ ಸಂಜೆ 5.30ರ ವರೆಗೆ ಒಪಿಡಿ ಮತ್ತು ಐಪಿಡಿಯಲ್ಲಿ ಕಾರ್ಯನಿರ್ವಹಿಸಿ,
5.30 ರಿಂದ ರಾತ್ರಿ 9 ಗಂಟೆವರೆಗೆ ಶಸ್ತ್ರಚಿಕಿತ್ಸಾ ಕೊಠಡಿಗೆ ತೆರಳಿ 8 ಅಪರೇಷನ್ ಮಾಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿಗೆ ಬಂದಿಳಿದ AICC ಅಧ್ಯಕ್ಷ ಖರ್ಗೆ, ಕಾಂಗ್ರೆಸ್‍ನಲ್ಲಿ ಹಬ್ಬದ ವಾತಾವರಣ

ಒಪಿಡಿ ಮುಗಿಸಿ ಜನರಲ್ ವಾರ್ಡ್‍ನಲ್ಲಿರುವ ಗರ್ಭಿಣಿ ಮಹಿಳೆಯರನ್ನು ನೋಡಲು ಹೋಗುವ ಸಂದರ್ಭದಲ್ಲಿ ಮೃತ ಮಹಿಳೆ ತಪಾಸಣೆಗೆ ಒಳಗಾಗಲು ಹಿಂದೇಟು ಹಾಕುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗುವಂತೆ ಬುದ್ಧಿವಾದ ಹೇಳಿ, ಗರ್ಭಿಣಿಯರನ್ನು ನೋಡಲು ಹೋಗಿದ್ದೆ. ಇದೆಲ್ಲ ಅಂದಿನ ವಿಡಿಯೋ ಫುಟೇಜ್‍ನಲ್ಲಿ ದಾಖಲಾಗಿದೆ.

ಈ ಎಲ್ಲಾ ದಾಖಲೆಗಳ ಸಮೇತ ನೊಟೀಸ್‍ಗೆ ಉತ್ತರ ನೀಡಿದ್ದರೂ ನನ್ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸಚಿವರನ್ನು ಕೇಳಿದರೆ ರಾಜಕೀಯ ಒತ್ತಡವಿತ್ತು. ಅದಕ್ಕಾಗಿ ಅಮಾನತು ಮಾಡಿದ್ದೇವೆ ಎಂಬ ಉತ್ತರ ನೀಡುತ್ತಾರೆ. ಇದರಿಂದ ನನ್ನ ಮಾನಸಿಕ ಸ್ಥೈರ್ಯವೇ ಕುಗ್ಗಿ ಹೋಗಿದೆ ಎಂದು ಪತ್ರ ಬರೆದು ತಮ್ನ ಅಳಲು ತೋಡಿಕೊಂಡಿದ್ದಾರೆ.

ಈ ವಿಚಾರವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಅಮಾನತುಗೊಂಡ ವೈದ್ಯೆ ಡಾ.ಉಷಾ, ಪ್ರಕರಣದಲ್ಲಿ ನನ್ನ ಪಾತ್ರವಿಲ್ಲದಿದ್ದರೂ ಅಮಾನತುಮಾಡಿರುವುದು ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಟ್ಟಾರೆ ಪ್ರಕರಣದ ಬಗ್ಗೆ ಎನ್‍ಇಪಿಎಸ್ ಇನ್ಸ್‍ಸ್ಪೆಕ್ಟರ್ ವಿದ್ಯಾಶ್ರೀ ಅವರು ಸಂಪೂರ್ಣ ವರದಿ ನೀಡಿದ್ದಾರೆ. ಮೃತ ಮಹಿಳೆ ವೈಯಕ್ತಿಕ ಸಮಸ್ಯೆಗಳಿಗಾಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲಾಗದೆ, ವಾಪಸ್ ಮನೆಗೆ ಹೋಗಿದ್ದು, ಮೊದಲನೆ ಹೆರಿಗೆ ಮನೆಯಲ್ಲಿಯೇ ಆಗಿದ್ದರಿಂದ ಈ ಹೆರಿಗೆಯೂ ಮನೆಯಲ್ಲಿಯೇ ಆಗಲಿದೆ ಎಂದು ಹಠ ಮಾಡಿದ್ದು, ನೆರೆಹೊರೆಯವರ ಬುದ್ಧಿವಾದದ ಮೇಲೆ ಆಸ್ಪತ್ರೆಗೆ ಬಂದಿದ್ದಾಗಿ ಪೊಲೀಸ್ ದಾಖಲೆಯಲ್ಲಿದೆ.

ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ

ಆಸ್ಪತ್ರೆಯಲ್ಲಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಆಕೆಗೆ ತಪಾಸಣೆಗೆ ಒಳಗಾಗುವಂತೆ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಒಪ್ಪಲಿಲ್ಲ. ಆಕೆಯ ವೈಯಕ್ತಿಕ ಸಮಸ್ಯೆಯಿಂದಲೇ ಚಿಕಿತ್ಸೆ ಪಡೆಯದೆ ವಾಪಸ್ ಹೋಗಿದ್ದಾಳೆ. ಇದರಲ್ಲಿ ನನ್ನ ಪಾತ್ರವೇ ಇಲ್ಲ. ಆಪರೇಷನ್ ರೂಮ್‍ನಲ್ಲಿದ್ದ ನನ್ನ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಿ ತಲೆದಂಡ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Articles You Might Like

Share This Article