ಜ.14ರವರೆಗೆ ತುಮಕೂರು ರಸ್ತೆ ಮೇಲ್ಸೇತುವೆ ಬಂದ್ ಮುಂದುವರಿಕೆ

Social Share

ಟಿ.ದಾಸರಹಳ್ಳಿ, ಜ.7- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೊರಗುಂಟೆ ಪಾಳ್ಯದಿಂದ ಅಂಚೆಪಾಳ್ಯದವರೆಗೆ ನಿರ್ಮಾಣ ವಾಗಿರುವ ಮೇಲು ಸೇತುವೆಯಲ್ಲಿ ದೋಷ ಕಂಡುಬಂದಿದ್ದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಕ್ಕಾಗಿ ಮಾಡಲಾಗಿದ್ದ ಬಂದ್‍ನ್ನು ಜ.14ರವರೆಗೆ ಮುಂದುವರೆಸಲಾಗಿದೆ. ಆರಂಭದಲ್ಲಿ ಡಿ.25 ರಿಂದ ಡಿ.31ರವರೆಗೆ ಒಂದು ವಾರ ಮಾತ್ರ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಕಾರದವರು ತಿಳಿಸಿದ್ದರು.
ಹೊಸ ವರ್ಷ ಆರಂಭವಾಗಿ ವಾರ ಕಳೆದರೂ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಸದ್ಯಕ್ಕೆ ಮುಕ್ತವಾಗುವ ಲಕ್ಷಣಗಳು ಕಾಣುತ್ತಿಲ್ಲ . ಅಲ್ಲದೆ ಜ.14ರವರೆಗೆ ಫ್ಲೈಓವರ್ ಬಂದ್ ಮುಂದುವರಿಯಲಿದೆ ಎಂದು ಪೀಣ್ಯ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.ಹೀಗಾಗಿ ತುಮಕೂರು ರಾಷ್ಟ್ರೀಯ ಹೆದ್ದಾರಿಯ ಜಾಲಹಳ್ಳಿ ಕ್ರಾಸ್‍ನಿಂದ ಅಂಚೆಪಾಳ್ಯದವರೆಗೆ ವಿಪರೀತ ಸಂಚಾರದಟ್ಟಣೆ ಕಂಡುಬರುತ್ತಿದೆ.
ಹತ್ತು ನಿಮಿಷ ಕ್ರಮಿಸಬೇಕಾದ ಹಾದಿಗೆ ಗಂಟೆಗಟ್ಟಲೆ ರಸ್ತೆಯಲ್ಲಾ ಕಾಯಬೇಕಾದ ಕಾರಣ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದ ಸುಮಾರು 20 ಜಿಲ್ಲಾಗಳಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಮೇಲು ಸೇತುವೆಯ ದುರಸ್ತಿ ಕಾರ್ಯ ಕಾಲಮಿತಿಯಲ್ಲಿ ನಡೆಯುತ್ತಿಲ್ಲ .
ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮೇಲು ಸೇತುವೆಯಲ್ಲಿ ಒಟ್ಟು 116 ಪಿಲ್ಲರ್‍ಗಳಿದ್ದು 101 ಮತ್ತು 102ನೇ ಪಿಲ್ಲರ್‍ಗಳ ನಡುವಿನ ಸ್ಲಾಬ್‍ಗಳಲ್ಲಿದೋಷ ಕಂಡು ಬಂದಿದೆ. ಅದಕ್ಕಾಗಿ ಫ್ಲೈಓವರ್‍ನಲ್ಲಿ 16 ರೋಪ್‍ಗಳನ್ನು ಅಳವಡಿಸಲಾಗಿದೆ. ಉಳಿದ 15 ರೋಪ್‍ಗಳು ಸುಭದ್ರವಾಗಿವೆ. ಒಂದರಲ್ಲಿ ಮಾತ್ರ ತೊಂದರೆ ಇದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಆದರೆ 15 ದಿನಗಳಿಂದ ಒಂದೇ ಒಂದು ರೋಪ್ ಸೆಗ್ಮೆಂಟ್ ನಲ್ಲಿ ಆಗಿರುವ ದೋಷವನ್ನು ಸರಿಪಡಿಸಲು ಆಗಿಲ್ಲ ದುರಸ್ತಿ ಕಾರ್ಯ ಮುಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜ 14ರವರೆಗೆ ಕಾಲಾವಕಾಶ ಕೇಳಿದ್ದಾರೆ. ಅದೇನೇ ಆಗಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಸಂಚಾರ ಸ್ಥಗಿತದಿಂದ ಸಾರ್ವಜನಿಕರು ಹೈರಾಣಾಗಿದ್ದು, ಪ್ರಯಾಣಿಕರ ಪರದಾಟ ಮುಂದುವರಿದಿದೆ.
ಫ್ಲೈಓವರ್ ಬದಲಿಗೆ ನೈಸ್ ರಸ್ತೆ ಮುಖಾಂತರ ಮಾಗಡಿ ರಸ್ತೆಯನ್ನು ಬಳಸಲು ತಿಳಿಸಲಾಗಿಗದೆ. ಆದರೆ ವಾಹನ ಸವಾರರು ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಕಟ್ಟಿ ಸಂಚರಿಸಲು ಹಿಂದೇಟು ಹಾಕುತ್ತಿದ್ದು ಸರ್ವಿಸ್ ರಸ್ತೆಯನ್ನೇ ಅವಲಂಬಿಸಿದ್ದಾರೆ.ಸಂಚಾರ ದಟ್ಟಣೆ ಮಿತಿ ಮೀರಿದ್ದು ವಾಹನ ಸವಾರರ ಅಳಲು ಕೇಳುವವರೆ ಇಲ್ಲ ಆ್ಯಂಬುಲೆ£್ಸïಗಳು ಪರಿಸ್ಥಿತಿಯೂ ಭಿನ್ನವಾಗಿಲ್ಲ ಟ್ರಾಫಿಕ್‍ನಿಂದಾಗಿ ರೋಗಿಗಳು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

Articles You Might Like

Share This Article