ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ , ಭ್ರಷ್ಟಾಚಾರದ ವಿಡಿಯೋ ವೈರಲ್

Social Share

ಬೆಂಗಳೂರು, ನ.26- ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಣತಾಣದಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ. ಇತ್ತೀಚೆಗೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳು ಸಾವನ್ನಪ್ಪಿದ ಹೃದಯಾ ವಿದ್ರಾವಕ ಘಟನೆಯ ಕಹಿ ನೆನಪು ಮಾಸುವ ಮುನ್ನವೆ ತುಮಕೂರು ಜಿಲ್ಲಾಸ್ಪತ್ರೆಯ ಮತ್ತೊಂದು ಕರ್ಮಖಾಂಡದ ದರ್ಶನವಾಗಿದೆ.

ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ ಆಸ್ಪತ್ರೆಯಲ್ಲಿರುವ ಸಿಬ್ಬಂದಿ ಮತ್ತು ಅಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಗಾರ್ಮೆಂಟ್ಸ್ ನೌಕರರೊಬ್ಬರು ತಮ್ಮ ಪತ್ನಿಗೆ ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಹಣ ನೀಡಬೇಕೆಂದು ಒತ್ತಾಯ ಬಂದಾಗ 2 ಸಾವಿರ ರೂ.ಗಳನ್ನು ಹೊಂದಿಸಿ ಕೊಡಲು ಹೋಗಿದ್ದಾರೆ. ಆ ವೇಳೆ ನಡೆದ ಸಂಭಾಷಣೆ ದಾಖಲಾಗಿದೆ. ಹಣ ಎಷ್ಟಿದೆ ಎಂದು ರೋಗಿಯ ಸಂಬಂಧಿಯನ್ನು ಆಸ್ಪತ್ರೆಯ ಸಿಬ್ಬಂದಿ ಪ್ರಶ್ನೆಸಿದ್ದಾರೆ.

ಬಿಬಿಎಂಪಿ ಆಂತರಿಕ ತನಿಖೆಯಲ್ಲೂ ಬಯಲಾಯ್ತು ‘ಚಿಲುಮೆ’ ಅಕ್ರಮ

2 ಸಾವಿರ ರೂ. ಇದೆ ಎಂದು ರೋಗಿಯ ಸಂಬಂಧಿ ಹೇಳಿದ್ದಾರೆ. ಅದು ಸಾಲುವುದಿಲ್ಲ. ಸರ್‍ಗೆ ಕೊಡಬೇಕು, ನೀವೆ ಕೊಟ್ಟು ಬಿಡಿ ನನಗೆ ತಲೆನೋವು ಆದರೂ ಕಡಿಮೆಯಾಗುತ್ತದೆ ಎಂದು ಸಿಬ್ಬಂದಿ ಉತ್ತರಿಸಿದ್ದಾರೆ.

ರೋಗಿಯ ಸಂಬಂಧಿ, ನಾನು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನು ಸಂಬಳವಾಗಿಲ್ಲ, ಲಂಚದ ಪ್ರಮಾಣ ಕಡಿಮೆ ಮಾಡಿಕೊಳ್ಳಿ ಎಂದು ಗೋಗರೆದಿದ್ದಾರೆ. ಇದಕ್ಕೆ ಕರಗದ ಆಸ್ಪತ್ರೆ ಸಿಬ್ಬಂದಿ ನೀವು ಕೊಡುವ 2 ಸಾವಿರ ರೂಪಾಯಿಗಳನ್ನು ನಾನೊಬ್ಬಳೆ ಇಟ್ಟುಕೊಳ್ಳುವುದಿಲ್ಲ.

ಎಲ್ಲರಿಗೂ ಡಿವೈಡ್ ಮಾಡಬೇಕಿದೆ. ಒಂದು ವೇಳೆ ನೀವೆ ಎಲ್ಲರಿಗೂ ತಲುಪಿಸಿಬಿಟ್ಟರೆ ನನ್ನ ತಲೆನೋವು ಕಡಿಮೆಯಾಗುತ್ತದೆ. ಅವರಿಗೆ 2 ಸಾವಿರ, ಅವರಿಗೆ 2 ಸಾವಿರದಂತೆ ಹಂಚಬೇಕಿದೆ. ನೀವು ಕೊಡುವ 2 ಸಾವಿರದಲ್ಲಿ ತಲಾ ಐದು ನೂರು ರೂಪಾಯಿಗಳಂತೆ ಹಂಚಲಾಗುವುದಿಲ್ಲ ಎಂದು ಪ್ರತ್ಯುತ್ತರಿಸಿದ್ದಾರೆ.

ಚಂದ್ರನ ಅಂಗಳದಲ್ಲಿ ಪರಮಾಣು ಶಕ್ತಿ ಚಾಲಿತ ನೆಲೆ ಸ್ಥಾಪಿಸಲಿದೆ ಚೀನಾ

ಆಗ ಸಿಬ್ಬಂದಿಯ ಎದುರಿಗಿದ್ದ ಮತ್ತೊಬ್ಬ ಅಧಿಕಾರಿ, ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎಂಬಂತೆ ಪಕ್ಷಪಾತ ಮಾಡಲು ಸಾಧ್ಯವಿಲ್ಲ. ನೀವು 2 ಸಾವಿರ ಕೊಟ್ರೆ ವಾರ್ಡ್‍ನಲ್ಲಿರುವ ಉಳಿದವರು ಅಷ್ಟೇ ಕೊಡುತ್ತಾರೆ ಎಂದು ಹಿತ ಬೋಧನೆ ಮಾಡಿದ್ದಾರೆ.

ಸದ್ಯಕ್ಕೆ ಇರುವಷ್ಟನ್ನು ಇಟ್ಟುಕೊಳ್ಳಿ ಎಂದು ರೋಗಿಯ ಸಂಬಂಧಿ ಗೋಗರೆದರೂ, ಚಾನ್ಸೇ… ಇಲ್ಲ ಎಂದು ಸಿಬ್ಬಂದಿ ಸಿನಿಮೆಯ ಶೈಲಿಯಲ್ಲಿ ಅಲ್ಲಗಳೆದಿದ್ದಾರೆ.

Tumkur, District, Hospital, Corruption, video, viral,

Articles You Might Like

Share This Article