ಅಮಾನುಷವಾಗಿ ಥಳಿಸಿದ ಉಪನ್ಯಾಸಕ, ಪ್ರಜ್ಞೆ ತಪ್ಪಿದ ವಿದ್ಯಾರ್ಥಿ

Social Share

ತುಮಕೂರು,ಡಿ.2- ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದು ಆತ ಪ್ರಜ್ಞೆಹೀನ ಸ್ಥಿತಿಗೆ ತಲುಪಿದ ಪ್ರಕರಣ ತುಮಕೂರಿನ ದೇವರಾಯನದುರ್ಗದಲ್ಲಿರುವ ನವೋದಯ ಶಾಲೆಯಲ್ಲಿ ನಡೆದಿದೆ.

ಉಪನ್ಯಾಸಕರ ಹೊಡೆತಕ್ಕೆ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ದು, ಕೆಲ ಕಾಲ ಸಂಸ್ಥೆಯ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತುಮಕೂರು ತಾಲ್ಲೂಕು ಹೆಬ್ಬೂರು ಭಾಗದ ವಿದ್ಯಾರ್ಥಿಗೆ ಉಪನ್ಯಾಸಕರು ಥಳಿಸಿರುವುದು ಗೋತ್ತಾಗಿದೆ.

ಪೋಷಕರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದು, ಉಪನ್ಯಾಸಕರ ವಿರುದ್ಧ ವಾರದ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಪೋಷಕರು ಎಚ್ಚರಿಸಲಾಗಿದೆ.

ಯುಪಿ ಡಿಸಿಎಂಗಳಿಗೆ ಬಂಪರ್ ಆಫರ್ ನೀಡಿದ ಅಖಿಲೇಶ್ ಯಾದವ್

ಸದರಿ ಉಪನ್ಯಾಸಕ ಈ ಹಿಂದೆ ಇದ್ದ ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಥಳಿಸಿದ ಉದಾಹರಣೆ ಇದೆ. ಅನುಚಿತ ವರ್ತನೆಯ ಕಾರಣಕ್ಕೆ ಆತನನ್ನು ತುಮಕೂರಿನ ನವೋದಯ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಗಾಯಕ ಸಿಧು ಮೂಸೆವಾಲಾ ಹಂತಕ ಗೋಲ್ಡಿ ಅಮೆರಿಕಾದಲ್ಲಿ ಸೆರೆ..!

Tumkur, lecturer, beat, student,

Articles You Might Like

Share This Article