ತುಮಕೂರು, ಫೆ.28- ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಒಲಿಯುತ್ತದೆ ಎಂದು ಕೆಲವರು ಜೋಡಿ ನರಿಗಳಫೋಟೋಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಿದ್ದನ್ನು ನೋಡಿದ್ದೇವೆ. ಆದರೆ, ಇನ್ನೊಬ್ಬ ಮೂಢನಂಬಿಕೆಗೆ ಜೋತುಬಿದ್ದು ಜೀವಂತ ನರಿಯನ್ನು ಕೋಳಿಫಾರಂನಲ್ಲಿ ಸಾಕಿ ಬಂಧನಕ್ಕೊಳಗಾಗಿದ್ದಾನೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿಕಾಂತ್ ಎಂಬುವವರು ತನ್ನ ಕೋಳಿಫಾರಂನಲ್ಲಿ ನರಿ ಸಾಕಿರುವುದರ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಐಡಿ ಸಂಚಾರ ಅರಣ್ಯ ಘಟಕದ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ನಾಳೆಯಿಂದ ಸರ್ಕಾರಿ ಕಚೇರಿಗಳು ಬಂದ್..?
ಕಳೆದ ಏಳು ತಿಂಗಳಿನಿಂದ ಗ್ರಾಮದ ಕೆರೆ ಸಮೀಪ ಲಕ್ಷ್ಮಿಕಾಂತ್‍ಗೆ ನರಿಮರಿಗಳು ಸಿಕ್ಕಿವೆ. ಇವುಗಳಲ್ಲಿ ಒಂದು ಮರಿಯನ್ನು ತಂದು ತನ್ನ ಕೋಳಿಫಾರಂನಲ್ಲಿ ಬೋನ್‍ನಲ್ಲಿಟ್ಟು ಸಾಕುತ್ತಿದ್ದ. ಅಲ್ಲದೆ, ಪ್ರತಿನಿತ್ಯ ಮುಂಜಾನೆ ನರಿಮುಖ ನೋಡಿ ಅಂದಿನ ಕೆಲಸ- ಕಾರ್ಯಗಳನ್ನು ಮಾಡುತ್ತಿದ್ದ. ಆದರೆ, ಅದೃಷ್ಟ ಎಂದು ಯಾವ ನರಿಯ ಮುಖ ನೋಡುತ್ತಿದ್ದನೋ ಆ ನರಿಯೇ ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಮೂಢನಂಬಿಕೆಯಿಂದ ಈ ರೀತಿ ಮಾಡಿದೆನೇ ವಿನಃ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ತಿಳಿಸಿದ್ದಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಹಿಂದೂ ದೇವರುಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದವನಿಗೆ ಬಿತ್ತು ಗೂಸಾ
ಸ್ಥಳೀಯ ವಲಯ ಅರಣ್ಯಾಧಿಕಾರಿಗಳು, ತುಮಕೂರು ವಲಯ, ತುಮಕೂರು ಜಿಲ್ಲಾಯವರಿಗೆ ವನ್ಯಜೀವಿಯಾದ ನರಿಯ ಸುರಕ್ಷತೆ ಮತ್ತು ಸಂರಕ್ಷಣೆಯ ಸಲುವಾಗಿ ನ್ಯಾಯಾಲಯದ ಅನುಮತಿ ಪಡೆದು ನರಿಯನ್ನು ಕಾಡಿಗೆ ಬಿಡಲು ಅವರ ಸುಪರ್ದಿಗೆ ನೀಡಲಾಗಿರುತ್ತದೆ.
Tumkur, man, fox, arrested,