ತುಮಕೂರು,ಫೆ.24-ಬೆಂಗಳೂರಿನಿಂದ ತುಮಕೂರು- ವಸಂತನರಸಾಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬಜೆಟ್ನಲ್ಲಿ ಆದ್ಯತೆ ನೀಡುವಂತೆ ಸಂಸದ ಜಿ.ಎಸ್.ಬಸವರಾಜು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸುತ್ತಿರುವ ಬಜೆಟ್ ನಲ್ಲಿ ಜಿಲ್ಲಾಯ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪತ್ರ ಬರೆದಿದ್ದು, ಮೆಟ್ರೋ ಜಿಲ್ಲಾಗೆ ಅಗತ್ಯವಾಗಿದ್ದು, ಈ ಯೋಜನೆಗೆ ಒತ್ತು ನೀಡಿ ಅನುಷ್ಠಾನಗೊಳಿಸಬೇಕು ಎಂದರು.
ಜಿಲ್ಲಾಯ ವಸಂತಾನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಒಂದು ಬೆಳೆ ಒಂದು ಉತ್ಪನ್ನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೊಕೊನಟ್ ಸ್ಪೆಷಲ್ ಎಕನಾಮಿಕ್ ಝೋನ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಈಗಾಗಲೇ ಜಿಲ್ಲಾಗೆ ಘೋಷಣೆ ಮಾಡಿರುವ ಮೆಡಿಕಲ್ ಕಾಲೇಜು, ಕ್ರೀಡಾ ಯೂನಿವರ್ಸಿಟಿ, ಕರ್ನಾಟಕ ಹೆರಿಟೇಜ್ ಹಬï, ಮಾಡಲು ಅಗತ್ಯ ಅನುದಾನ ಮಂಜೂರು ಮಾಡಬೇಕು, ಹೆಚ್ಎಎಲ್ಗೆ ಅಗತ್ಯ ಭೂಮಿ ಮತ್ತು ಸೈನಿಕ್ ಶಾಲೆ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಆಡಳಿತಾತ್ಮಕ ದೃಷ್ಠಿಯಿಂದ ಮಧುಗಿರಿ ಜಿಲ್ಲಾಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದ ಅವರು, ಜಿಲ್ಲಾಯಲ್ಲಿ ಕೃಷಿ ಕಾಲೇಜು ಸ್ಥಾಪನೆ ಮಾಡಲು ಕ್ರಮವಹಿಸಬೇಕು, ಸಿರಾ-ಮಧುಗಿರಿ-ಕೊರಟಗೆರೆಯಲದಲಿ ಮೆಗಾ ಟೆಕ್ಸ್ ಟೈಲ್ಸï ಪಾರ್ಕ್ ನಿರ್ಮಾಣಕ್ಕೆ ಬಜೆಟ್ನಲ್ಲಿ ಒತ್ತು ನೀಡಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಕುಮಾರಧಾರ ನದಿ ತಿರುವು ಯೋಜನೆಯಿಂದ ಬರಪೀಡಿತ ಪ್ರದೇಶಗಳಾದ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲಾಗಳಿಗೆ 130ಟಿಎಂಸಿ ನೀರು ದೊರಲಿದೆ, ಪೆನ್ನಾರ್ ನದಿ ಜೋಡಣೆ ಯೋಜನೆಯಿಂದ ಜಿಲ್ಲಾಗೂ ನೀರು ದೊರಲಿದೆ ಎಂದ ಅವರು, ಜಿಲ್ಲಾಯ ಸಿದ್ದುಹಲಸು ತಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇದ್ದು, ಜಿಲ್ಲಾಯಲ್ಲಿ ಹಲಸಿನ ಪಾರ್ಕ್ ನಿರ್ಮಾಣ ಮಾಡಬೇಕೆಂದರು.
ಹೇಮಾವತಿ ನಾಲೆಯ ವ್ಯಾಪ್ತಿಯಲ್ಲಿ ಮೈಕ್ರೋ ಇರಿಗೇಷನ್ ಪದ್ಧತಿಯನ್ನು ಅನುಷ್ಠಾನಗೊಳಿಸುವುದರಿಂದ ನೀರಿನ ಬಳಕೆ ಕಡಿಮೆಯಾಗಲಿದ್ದು, ಉಳಿಕೆಯಾಗುವ ನೀರನ್ನು ಜಲಜೀವನ್ ಮಿಷನ್ ಯೋಜನೆಗೆ ನೀರು ಒದಗಿಸಲು ಕ್ರಮ ರೂಪಿಸಬೇಕೆಂದು ಹೇಳಿದ ಅವರು, ನೆನೆಗುಂದಿಗೆ ಬಿದ್ದಿರುವ ಸ್ಕಿಲ್ ಪಾರ್ಕ್ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾಯಲ್ಲಿರುವ ಇಸ್ರೋ ಘಟಕವನ್ನು ಗುಜರಾತ್ ಗೆ ಸ್ಥಳಾಂತರ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಸ್ರೋ ಸ್ಥಳಾಂತರವಾಗಲು ಬಿಡುವುದಿಲ್ಲ, ಸ್ಥಳಾಂತರವಾದರೆ ಉಪವಾಸ ಕೂರುವುದಾಗಿ ಎಚ್ಚರಿಕೆ ನೀಡಿದರು.
