ಮಂಗಳೂರು ಆಟೋ ಸ್ಪೋಟಕ್ಕೆ ತುಮಕೂರು ರೈಲ್ವೆ ಸಿಬ್ಬಂದಿ ಹೆಸರು ಲಿಂಕ್..!

Social Share

ತುಮಕೂರು,ನ.20- ಮಂಗಳೂರಿನಲ್ಲಿ ಸಂಭವಿಸಿದ ಆಟೋ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ರೈಲ್ವೆ ಸಿಬ್ಬಂದಿಯೊಬ್ಬರ ಹೆಸರು ತಳಕು ಹಾಕಿಕೊಂಡಿದ್ದು, ಸ್ಪೋಟ ಸಂಭವಿಸಿರುವ ಸ್ಥಳದಲ್ಲಿ ದೊರೆತಿರುವ ಗುರುತಿನಪತ್ರ ತುಮಕೂರಿನ ರೈಲ್ವೆ ಸಿಬ್ಬಂದಿಯದು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಮೂಲತಃ ಹುಬ್ಬಳ್ಳಿ ಮೂಲಕ ಪ್ರೇಮರಾಜ್ ಹುಟಗಿ, ತುಮಕೂರಿನ ರೈಲ್ವೆ ವಿಭಾಗದಲ್ಲಿ ಟ್ರ್ಯಾಕ್‍ಮೆನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್‍ಕಾರ್ಡ್ ಕಳೆದುಕೊಂಡಿದ್ದ. ಮಂಗಳೂರಿನಲ್ಲಿ ನಡೆದಿರುವ ಆಟೋದಲ್ಲಿ ಸ್ಪೋಟ ಆದಾಗ ಅದರಲ್ಲಿ ಗುರುತಿನ ಪತ್ರವೊಂದು ದೊರೆಕಿದೆ.

ಮಂಗಳೂರಿನ ಆಟೋ ಸ್ಪೋಟ ಪ್ರಕರಣ ಎನ್‍ಐಎಗೆ ಹಸ್ತಾಂತರ

ಎಡಿಜಿಪಿ ಅಲೋಕ್‍ಕುಮಾರ್ ಶನಿವಾರ ರಾತ್ರಿ ಪ್ರೇಮರಾಜ್ ಅವರಿಗೆ ಕರೆ ಮಾಡಿದ್ದು, ಕೂಡಲೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಿದ್ದರು. ಅದರಂತೆ ತುಮಕೂರು ಎಸ್‍ಪಿ ರಾಹುಲ್‍ಕುಮಾರ್ ಶಹಪುರ್ ವಾಡ್ ಅವರನ್ನು ಪ್ರೇಮರಾಜ್ ಹುಟಗಿ ಸಂಪರ್ಕ ಮಾಡಿದ್ದಾರೆ.

ನನ್ನ ಹೆಸರಲ್ಲಿ ಈ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿರುವ ಪ್ರೇಮರಾಜ್ ಹುಟಗಿ, ನನಗೂ ಆ ಗುರುತಿನ ಪತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

3ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ

ನಿನ್ನೆ ನಮ್ಮ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ ಎಂದು ಹುಟಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Mangalore, #bomb, #blast, #Tumkur, #railway, #staff,

Articles You Might Like

Share This Article