ತುಂಗಭದ್ರಾ ಕಾಲುವೆಗೆ ಆಟೋ ಬಿದ್ದು ಇಬ್ಬರು ಕಾರ್ಮಿಕರ ಸಾವು

Social Share

ಬಳ್ಳಾರಿ, ಸೆ.14- ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಆಟೋ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ ನಾಲ್ವರು ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಕೊಳಗಲ್ ಗ್ರಾಮದ ಬಳಿಯ ತುಂಗ ಭದ್ರಾ ಕಾಲುವೆ ಬಳಿ ಸಂಭವಿಸಿದೆ.
ದುರ್ಗವ್ವ (40), ನಿಂಗಮ್ಮ (38) ಮೃತ ದುರ್ದೈವಿಗಳು.

ಆಟೋ ಚಾಲಕ ಭೀಮ ಸೇರಿದಂತೆ 8 ಜನ ಕೂಲಿ ಕಾರ್ಮಿಕರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಘಟನೆಯಲ್ಲಿ ಯರ್ರಮ್ಮ ಹಾಗೂ ಹೇಮಾವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ.

ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ

ಕೂಲಿ ಕಾರ್ಮಿಕರು ಕೊಳಗಲ್ ಗ್ರಾಮದಿಂದ ಕೃಷ್ಣಾ ನಗರಕ್ಕೆ ಆಟೋದಲ್ಲಿ ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಆಟೋ ಕಾಲುವೆಗೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ದಾವಿಸಿ ಪರಿಶೀಲನೆ ನಡೆಸಿದ್ದಾರೆ. ನೀರು ಪಾಲಾದವರ ಶೋಧಕಾರ್ಯ ಮುಂದುವರೆದಿದೆ.

Articles You Might Like

Share This Article