ಹಾವೇರಿ,ಜ.2- ಈಜಲು ತೆರಳಿದ್ದ ಮೂವರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲಾಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ನಡೆದಿದೆ.
ಮೃತರನ್ನು ನವೀನ್ ಕುರಗುಂದ(20), ವಿಕಾಸ್ ಪಾಟೀಲï(20), ನೇಪಾಳ ಮೂಲದ ಪ್ರೇಮ್ ಬೋರಾ(25) ಎಂದು ಗುರುತಿಸಲಾಗಿದೆ .ಹೊಸ ವರ್ಷದ ಪಾರ್ಟಿ ಮಾಡಿ ನಂತರ ನದಿಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ.
ಕೊಳವೆ ಬಾವಿ ಹಗರಣ : ಬಿಬಿಎಂಪಿ ಮಾಜಿ ಸದಸ್ಯರಿಗೆ ಕಂಟಕ
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದು ಇನ್ನು ಮೃತದೇಹಗಳು ಪತ್ತೆಯಾಗಿಲ್ಲ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
tungabhadra river, Three, death,