ಶ್ರದ್ಧಾ ಹತ್ಯೆ ಬಳಿಕ ಹೆದರಿ ತುನಿಶಾಳಿಂದ ದೂರವಾಗಿದ್ದೆ : ಆರೋಪಿ ಹೇಳಿಕೆ

Social Share

ಮುಂಬೈ,ಡಿ.26- ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ ಶ್ರದ್ಧಾ ವಾಲ್ಕರ್ ಪ್ರಕರಣದ ನಂತರ ದೇಶದಲ್ಲಿ ಎದುರಾದ ಬದಲಾವಣೆಗಳಿಗೆ ಹೆದರಿ ನಾನು ಸಹಜೀವನ ನಡೆಸುತ್ತಿದ್ದ ತುನಿಶಾ ಶರ್ಮಾಳಿಂದ ದೂರವಾಗಲು ಬಯಸಿದ್ದೆ ಎಂದು ಬಂಧಿತ ಆರೋಪಿ ಶಿಝನ್ ಖಾನ್ ಹೇಳಿಕೆ ನೀಡಿದ್ದಾನೆ.

ಕಿರುತೆರೆ ನಟಿಸ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈನ ವಾಲಿವ್ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಆತ, ತಮ್ಮಿಬ್ಬರ ನಡುವೆ 15 ದಿನಗಳ ಹಿಂದೆ ಬ್ರೆಕ್‍ಅಪ್ ಆಗಿತ್ತು. ಆ ವೇಳೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು. ನಾನು ರಕ್ಷಣೆ ಮಾಡಿದ್ದಲ್ಲದೆ, ಆಕೆಯನ್ನು ಹುಷಾರಾಗಿ ನೋಡಿಕೊಳ್ಳುವಂತೆ ಅವರ ತಾಯಿಗೆ ಹೇಳಿದ್ದೆ ಎಂದು ತಿಳಿಸಿದ್ದಾನೆ.

ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣದ ನಂತರ ದೇಶದಲ್ಲಿ ಸೃಷ್ಟಿಯಾದ ವಾತಾವರಣ ನನ್ನನ್ನು ವಿಚಲಿತನನ್ನಾಗಿ ಮಾಡಿತ್ತು. ನಮ್ಮಿಬ್ಬರ ಧರ್ಮಾಚರಣೆಗಳು ಬೇರೆಯಾಗಿದ್ದವುಮತ್ತು ವಯಸ್ಸಿನ ಅಂತರವೂ ಹೆಚ್ಚಿತ್ತು. ಹೀಗಾಗಿ ನಾನು ಆಕೆಯಿಂದ ದೂರವಾಗಲು ಬಯಸಿದ್ದೆ ಎಂದು ಖಾನ್ ಹೇಳಿದ್ದಾನೆ.

ಡಿಸೆಂಬರ್ 24ರಂದು ಚಿತ್ರೀಕರಣದ ಸೆಟ್‍ನ ಶೌಚಾಲಯದಲ್ಲಿ ತುನಿಶಾ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಳು. ಸ್ಥಳದಲ್ಲಿ ಯಾವುದೇ ಪತ್ರಗಳು ಸಿಕ್ಕಿರಲಿಲ್ಲ. ತುನಿಶಾಳ ತಾಯಿ ವಾಸಲಿವ್ ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ಮಗಳ ಸಾವಿಗೆ ಶಿಝನ್ ಖಾನ್ ಕಾರಣ ಎಂದು ಆರೋಪಿಸಿದರು. ಭಾನುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಅಧಿವೇಶನ ಆರಂಭವಾಗಿ ವಾರಕಳೆದರೂ ನಿಲ್ಲದ ಸಾಲು ಸಾಲು ಪ್ರತಿಭಟನೆಗಳು

ಈ ವೇಳೆ ನಡೆದ ವಿಚಾರಣೆಯಲ್ಲಿ ಮಾಹಿತಿ ನೀಡಿರುವ ಆರೋಪಿ, ನಮ್ಮಿಬ್ಬರ ಬ್ರೆಕ್ ಆದಾಗಿನಿಂದಲೂ ಆಕೆ ಸಾಯಲು ಪ್ರಯತ್ನಿಸುತ್ತಿದ್ದಳು. ಆದರೆ ದೇಶದಲ್ಲಿನ ಪರಿಸ್ಥಿತಿಗಳು ನನ್ನನ್ನು ಆಕೆಯಿಂದ ದೂರ ಇರುವಂತೆ ಮಾಡಿದ್ದವು ಎಂದಿದ್ದಾನೆ.

ಸಾವನ್ನಪ್ಪುವ ದಿನ ಬೆಳಗ್ಗೆ ತುನಿಶಾ ಖುಷಿಯಿಂದಲೇ ತಾಯಿ ಮನೆಯಿಂದ ಹೊರಟ್ಟಿದ್ದಳು. ಮೊದಲ ಹಂತದ ಚಿತ್ರಿಕರಣದ ನಂತರ ಸೆಟ್‍ನಲ್ಲಿ ಸಹನಟನಾಗಿದ್ದ ಶೀಝನ್ ಜೊತೆ ಮೆಕಪ್ ರೂಂನಲ್ಲಿ ಕಾಣಿಸಿಕೊಂಡಿದ್ದಳು.

ಅಲ್ಲಿಂದ ಇಬ್ಬರು ಸಹಜವಾಗಿಯೇ ಊಟಕ್ಕೆ ತೆರಳಿದರು. ಅಂದು ತುನಿಶಾ ಊಟ ಮಾಡಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ವಾಪಾಸ್ ಮೆಕಪ್ ರೂಂನತ್ತ ಬಂಸದಿದ್ದಳು. ಶೀಝನ್ ಖಾನ್ ಊಟ ಮುಗಿಸಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ. ಶೌಚಾಲಯಕ್ಕೆ ಹೋಗಿದ್ದ ತುನಿಶಾ ಬಹಳ ಹೋತ್ತಾದರೂ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅವರ ಸಮ್ಮುಖದಲ್ಲಿ ಬಾಗಿಲು ಹೊಡೆದು ನೋಡಿದಾಗ ಆಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಪತ್ತೆಯಾಗಿತ್ತು.

ಶಾಲಾ ಮೈದಾನದಲ್ಲೇ ಇಬ್ಬರು ಯುವಕರ ಭೀಕರ ಕೊಲೆ..

ಶಿಝನ್ ವಿರುದ್ಧ ಆತ್ಮಹತ್ಯೆ ಪ್ರಚೋದನೆಗೆ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆಕೆಯ ತಾಯಿ ಮತ್ತು ಸೋದರ ಮಾವನ ಹೇಳಿಕೆ ದಾಖಲಿಸಿದ್ದಾರೆ. ಆರೋಪಿಗೆ ಶಿಕ್ಷೆಯಾಗಬೇಕು ಎಂದು ಮಾವ ಆಗ್ರಹಿಸಿದ್ದಾರೆ.

Tunisha Sharma, Sheezan Khan, broke up, because, different, religion,

Articles You Might Like

Share This Article