ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

Social Share

ಮುಂಬೈ,ಜ.2- ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ಹಿಂದೆ ಲವ್ ಜಿಹಾದ್ ಷಡ್ಯಂತ್ರವಿದೆ ಎಂಬ ಆರೋಪವನ್ನು ಶೇಜಾನ್ ಖಾನ್ ಕುಟುಂಬದ ಸದಸ್ಯರು ತಳ್ಳಿ ಹಾಕಿದ್ದಾರೆ.

ಕಿರುತೆರೆ ನಟಿ ತುನೀಶಾ ಶರ್ಮಾ ಡಿಸೆಂಬರ್ 24ರಂದು ಚಿತ್ರೀಕರಣದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ತಾಯಿ ವನೀತಾ ನೀಡಿದ ದೂರು ಆಧರಿಸಿ ತುನೀಶಾಳ ಸಹವರ್ತಿ ಶೇಜಾನ್ ಮೊಹಮ್ಮದ್ ಖಾನ್‍ನನ್ನು ಮಹಾರಾಷ್ಟ್ರ ಪಾಲ್ಗರ್ ಜಿಲ್ಲೆಯ ವಲಿವ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆತನ ನ್ಯಾಯಾಂಗ ಬಂಧನದ ಅವ 14 ದಿನಗಳ ಕಾಲ ವಿಸ್ತರಣೆಯಾಗಿದೆ.

ಈ ನಡುವೆ ತುನಿಶಾಳ ತಾಯಿ ವನಿತಾ ಮತ್ತು ಮಾವ ಪವನ್ ಶರ್ಮಾ ಹಲವು ಆರೋಪಗಳನ್ನು ಮಾಡಿದ್ದರು. ಅದಕ್ಕೇಲಾ ಇಂದು ಶೇಜಾನ್ ತಾಯಿ ಮತ್ತು ಆತನ ಸಹೋದರಿಯರು ಮತ್ತು ನಟಿಯರಾದ ಶಫಕ್ ನಾಜ್,ಫಲಕ್ ನಾಜ್, ವಕೀಲ ಶೈಲೇಂದ್ರ ಮಿಶ್ರಾ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ್ದಾರೆ.

ಶೈಲೇಂದ್ರ ಅವರು ಮಾತನಾಡಿ, ಶೇಜಾನ್ ಕುಟುಂಬದ ಜೊತೆ ಕಾಲ ಕಳೆಯುವಾಗ ತುನೀಶಾ ಸಂತೋಷದಿಂದ ಇದ್ದರು. ಈಗ ಆರೋಪ ಮಾಡುತ್ತಿರುವ ಪವನ್ ಶರ್ಮಾ ಆಕೆಯ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದನು. ಎಲ್ಲಾ ವಿಷಯದಲ್ಲೂ ಆತನ ಹಸ್ತಕ್ಷೇಪದಿಂದ ಸಿಟ್ಟಾಗಿದ್ದ ಆಕೆ ಪವನ್‍ನನ್ನು ಬೈದಿದ್ದಳು. ಈಗ ಆತ ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ದಕ್ಷಿಣದಲ್ಲಿ ಕಮಲ ಅರಳಿಸಲು ಮೋದಿ, ಶಾ ಮಾಸ್ಟರ್ ಪ್ಲಾನ್

ಫಲಾಖ್ ನಾಝ್ ಮಾತನಾಡಿ, ತುನೀಶಾ ಶರ್ಮ ನನ್ನ ಹಿರಿಯ ಸಹೋದರಿ ಇದ್ದಂತೆ. ಆಕೆ ಹಿಜಾಬ್ ಧರಿಸಿರುವ ಫೋಟೋ ಚಿತ್ರೀಕರಣದ ವೇಳೆ ತೆಗೆದಿದ್ದು. ಧರ್ಮ ಎಂಬುದು ಸಂಪೂರ್ಣ ವೈಯಕ್ತಿಕ, ನಾವು ಯಾರ ಮೇಲೂ ಅದನ್ನು ಹೇರಲು ಬಯಸುವುದಿಲ್ಲ. ಎಲ್ಲರಿಗೂ ಅವರದೇ ಆದ ಸ್ಥಳಾವಕಾಶವಿದೆ. ಧರ್ಮ ಪಾಲನೆಗೆ ಒತ್ತಾಯ ಮಾಡುವ ಅಧಿಕಾರವೂ ನಮಗಿಲ್ಲ. ನಾನು ಆಕೆಯನ್ನು ದರ್ಜಾಕ್ಕೆ ಕರೆದುಕೊಂಡು ಹೋಗಿದ್ದೆ ಎಂಬುದು ಸುಳ್ಳು ಆರೋಪ ಎಂದರು.

ಈ ಪ್ರಕರಣದಲ್ಲಿ ಧರ್ಮವನ್ನು ಏಕೆ ತರಲಾಗುತ್ತಿದೆ. ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಬಾಲ್ಯದಲ್ಲಿನ ಆಘಾತದಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು. ಆಕೆಗೆ ಹೆಚ್ಚಿನ ಕಾಳಜಿ ತೋರಿಸಬೇಕಿತ್ತು ಎಂದು ಹೇಳಿದ್ದಾರೆ.

ಶಫಕ್ ಮಾತನಾಡಿ, ನಾವು ಆಕೆಗೆ ಉರ್ದ ಮಾತನಾಡಲು ಒತ್ತಾಯಿಸಿದ್ದೇವು ಎಂದು ಆರೋಪಿಸಲಾಗಿದೆ. ಇದೇಲ್ಲಾ ಏಕೆ ಮಾತನಾಡುತ್ತಿದ್ದಾರೆ ಎಂದು ಗೋತ್ತಿಲ್ಲ. ನಾವು ಭಾರತದಲ್ಲಿದ್ದೇವೆ. ಭಾಷೆ ತೆಗೆದುಕೊಂಡು ಆಗಬೇಕಿರುವುದು ಏನು ಎಂದು ಪ್ರಶ್ನಿಸಿದರು.

ತುನೀಶಾ ಅವರ ತಾಯಿ ನಮಗೆ ಅಗೌರವ ತೋರಿಸಿದರು. ಆದರೆ ನಾವು ಅವರನ್ನು ಗೌರವಿಸುತ್ತಲೇ ಇದ್ದೇವು. ನಮ್ಮ ಮೇಲೆ ಆರೋಪ ಮಾಡುವವರು ಸೂಕ್ತ ದಾಖಲೆ ಕೊಡಲಿ ಎಂದು ಒತ್ತಾಯಿಸಿದ್ದಾರೆ.

ಶೇಜಾನ್ ತಾಯಿ ಮಾತನಾಡಿ, ತುನೀಶಾ ಫೆÇೀನ್‍ನಲ್ಲಿ ಮಾತನಾಡುವಾಗ ಆಕೆಯ ಕಪ್ಪಾಳಕ್ಕೆ ಬಾರಿಸಲಾಗಿದೆ ಎಂದು ಆಕೆಯ ತಾಯಿ ವನೀತಾ ಆರೋಪಿಸಿದ್ದಾರೆ. ಅದು ಗೋತ್ತಿದ್ದರೆ ತಾಯಿಯಾಗಿ ಆಕೆ ಹೇಗೆ ಸುಮ್ಮನಿದ್ದಳು, ಕಪ್ಪಾಳಕ್ಕೆ ಹೊಡೆದ ವ್ಯಕ್ತಿಗೆ ಏಕೆ ಪ್ರಶ್ನಿಸಲಿಲ್ಲ. ನಮ್ಮ ಮಗಳ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ಜೊತೆ ಮಾತನಾಡಿಕೊಂಡು ಸುಮ್ಮನಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಅತ್ತ ತುನೀಶಾ ಹೆಣ ಮಲಗಿತ್ತು, ಇತ್ತ ವನಿತಾ ಅವರ ತಾಯಿಯ ವಕೀಲರು ಪವರ್ ಆಫ್ ಅಟಾರ್ನಿ ತೆಗೆದುಕೊಳ್ಳುವಲ್ಲಿ ಬ್ಯೂಸಿಯಾಗಿದ್ದರು. ಇದು ಹೇಗೆ ಸಾಧ್ಯ. ತುನೀಶಾ ಸಾವು ನನಗೆ ಸಹಿಸಲು ಸಾಧ್ಯವಾಗದಷ್ಟು ನೋವು ನೀಡಿದೆ.

ನೋಟು ಅಮಾನೀಕರಣ ಮಾನ್ಯ ಮಾಡಿದ ಸುಪ್ರೀಂ

ನಾನು ಆಕೆಯನ್ನು ನನ್ನ ಮಗಳು ಎಂದೇ ಭಾವಿಸಿದ್ದೆ. ಆಕೆಯಂತೂ ಹೋದಳು. ನನ್ನ ಮಗ ನಿರಪರಾ ಜೈಲಿನಲ್ಲಿ ಇದ್ದಾನೆ. ಆತನೂ ಆತ್ಮಹತ್ಯೆಮಾಡಿಕೊಳ್ಳಬೇಕು ಎಂದು ವನೀತಾ ಬಯಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Articles You Might Like

Share This Article