ಟರ್ಕಿ-ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 15 ಸಾವಿರಕ್ಕೆ ಏರಿಕೆ

Social Share

ಗಜಿಯಾಂಟೆಪ್, ಫೆ .9- ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸತ್ತವರ ಸಂಖ್ಯೆ 15 ಸಾವಿರ ದಾಟಿದೆ.ಹಿಮಪಾತದಿಂದ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಬದುಕುಳಿದಿರುವವರ ಸಂಖ್ಯೆ ಕ್ಷೀಣಿಸಿದ್ದು ,ಅವಶೇಷಗಳಿಂದ ಹೆಚ್ಚಿನ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಭೂಕಂಪ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆಗಳನ್ನು ಒಪ್ಪಿಕೊಂಡ ಹತಾಶೆ ಮಾತುಗಳನಾಡಿದ್ದಾರೆ.

SC/STಮೀಸಲಾತಿ ಹೆಚ್ಚಳ ಪ್ರಸ್ತಾಪ ಕೇಂದ್ರಕ್ಕೆ ರವಾನೆ

ಹಟೇಯ ವಿಮಾನ ನಿಲ್ದಾಣದಲ್ಲಿ ರನ್‍ವೇ ನಾಶಗೊಂಡಿದ್ದು ಪರಿಹಾರ ಕಾರ್ಯ ವಿಳಂಭವಾಗಿದೆ.ಅಂತಹ ವಿಪತ್ತಿಗೆ ಸಿದ್ಧರಾಗಲು ಸಾಧ್ಯವಿಲ್ಲ ಎಂದು ಎರ್ಡೊಗನ್ ಹೇಳಿದರು. ಸುಮಾರು 25ಕ್ಕೂ ಹೆಚ್ಚು ದೇಶಗಳ ಪರಿಹಾರ ತಂಡಗಳು ಕಾರ್ಯನಿರ್ವಹಿಸಿದೆ ಆದರೆ ಭೂಕಂಪದ ವಿನಾಶದ ಪ್ರಮಾಣ ಮತ್ತು ಆಘಾತಗಳು ತುಂಬಾ ಅಗಾಧವಾಗಿದೆ ಅನೇಕ ಜನರು ಇನ್ನೂ ಸಹಾಯಕ್ಕಾಗಿ ಕಾಯುತ್ತಿದ್ದಾರೆ.

ಭೂಕಂಪ ನಂತರದ 72 ಗಂಟೆ ನಿರ್ಣಾಯಕ ಎಂದು ಪರಿಗಣಿಸಲಾಗುತ್ತದೆ ಎಂದು ಇಂಗ್ಲೆಂಡ್‍ನ ನಾಟಿಂಗ್‍ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದ ನೈಸರ್ಗಿಕ ಅಪಾಯಗಳ ತಜ್ಞ ಸ್ಟೀವನ್ ಗಾಡ್ಬಿ ಹೇಳಿದ್ದು , 24 ಗಂಟೆಗಳಲ್ಲಿ ಸರಾಸರಿ ಬದುಕುಳಿಯುವಿಕೆಯ ಅನುಪಾತವು 74% ಆಗಿದೆ, 72 ಗಂಟೆಗಳ ನಂತರ ಇದು 22% ಮತ್ತು ಐದನೇ ದಿನದ ವೇಳೆಗೆ ಇದು 6% ಇಳಿಯುತ್ತದೆ ಎಂದಿದ್ದಾರೆ.

ಹೃದಯ ವಿದ್ರಾವಕ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ ಅವಶೇಷಗಳಡಿಯಲ್ಲಿ ಸಿಲುಕಿದ್ದ ಎರಡು ವರ್ಷದ ಮಗುವನ್ನು ಕೊಸೊವೊ ರಕ್ಷಣಾ ಪಡೆಗಳು ರಕ್ಷಿಸಿದು ಮಗುವಿನ ತಲೆಗೆ ಮುತ್ತಿಟ್ಟು ಖುಷಿಪಟ್ಟಿದ್ದರೆ ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ

ಟರ್ಕಿ ಸಾವಿರಾರು ಮಕ್ಕಳು ಸಿಕ್ಕಿಬಿದ್ದಿರುವ ಹಲವಾರು ಭಯಾನಕ ಚಿತ್ರಗಳು ಮತ್ತು ವೀಡಿಯೊಗಳು ಹೊರಬಂದಿವೆ. ಈ ಹಿಂದೆ, ಸಿರಿಯಾದಲ್ಲಿ ಶಿಲಾಖಂಡರಾಶಿಗಳಿಂದ ರಕ್ಷಿಸಲ್ಪಟ್ಟ ನವಜಾತ ಶಿಶುವನ್ನು ತನ್ನ ಹೊಕ್ಕುಳಬಳ್ಳಿಯೊಂದಿಗೆ ಇನ್ನೂ ತನ್ನ ತಾಯಿಯೊಂದಿಗೆ ಸಂಪರ್ಕಿಸಿರುವುದನ್ನು ಅಸೋಸಿಯೇಟೆಡ್ ಪ್ರೆಸ್ ವರದಿ ತಿಳಿಸಿದೆ.

Turkey earthquake, British crews, join, rescue death toll, 15000,

Articles You Might Like

Share This Article