ಭೂಕಂಪನ ಪೀಡಿತ ಟರ್ಕಿಯಲ್ಲಿ ನರಕಯಾತನೆ: ಸಾವಿನ ಸಂಖ್ಯೆ 8000ಕ್ಕೇರಿಕೆ

Social Share

ಟರ್ಕಿ,ಫೆ.8-ಎಲ್ಲಲ್ಲೂ ಅವಶೇಷ ಏನು ಮಾಡಲಾಗದ ಅಸಾಯಕತೆ ಆಕ್ರಂದನ ನಡುವೆ ಭೂಕಂಪನ ಪೀಡಿತಟರ್ಕಿ ದೇಶದ ಜನತೆಯನ್ನು ಅಕ್ಷರಶಃ ನರಕಯಾತನೆಯಾಗಿದೆ. ಟರ್ಕಿ ಹಾಗೂ ಸಿರಿಯಾದಲ್ಲಿಕಳೆದ 48 ಗಂಟೆಯಲ್ಲಿ 4 ಪ್ರಬಲ ಭೂಕಂಪನ ಸಂಭವಿಸಿದ್ದು, ಈಗಾಗಲೇ 8000ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಆದರೆ ಕಟ್ಟಡದ ಅವಶೇಷಗಳಡಿ ಇನ್ನೂ 1,80,000 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಎಲ್ಲರೂ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಟರ್ಕಿಯಲ್ಲಿ 5,894 ಮಂದಿ ಮೃತಪಟ್ಟಿದ್ದು, ಸಿರಿಯಾದಲ್ಲಿ 1932 ಮಂದಿ ಸಾವನ್ನಪ್ಪಿದ್ದಾರೆ. ಅಂತಿಮವಾಗಿ ಇಂದು ಸಾವಿನ ಸಂಖ್ಯೆ 20,000 ಮೀರಬಹುದು ಎಂದು ಅಂದಾಜಿಸಲಾಗಿದೆ.

ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಭೂಕಂಪದಿಂದಾಗಿ ಕನಿಷ್ಠ 20,426 ಜನ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಎಟಿಎಂಗೆ ತುಂಬಿಸಬೇಕಿದ್ದ 1.3 ಕೋಟಿ ಹಣದೊಂದಿಗೆ ಪರಾರಿಯಾದವನಿಗೆ ಶೋಧ

ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದ್ದು ಹಲವಾರು ದೇಶಗಳು ನೆರವಿನ ಮುಂದಾಗಿದೆ ಅವಶೀಷ ತೆರವುಗೊಳಿಸುತ್ತಿರುವ ನಡೆವೆ ಶವಗಳು ಪತ್ತೆಯಾಗುತ್ತಿದೆ.

ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ನಲುಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದ ಎರ್ಡೊಗನ್ ಅವರು, ಮೂರು ತಿಂಗಳ ತುರ್ತು ಪರಿಸ್ಥಿತಿ ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಭೂಕಂಪಗಳ ಪರಿಣಾಮವಾಗಿ ಟರ್ಕಿಶ್ ಬಂದರಿನ ಬೆಂಕಿ ಕಾಣಿಸಿಕೊಂಡಿದ್ದು,ನೂರಾರು ಹಡಗು ಕಂಟೈನರ್‍ಗಳು ಬೆಂಕಿಗೆ ಆಹುತಿಯಾದೆ ಹೆಲಿಕಾಪ್ಟರ್‍ಗಳನ್ನು ಬಳಸಿಕೊಂಡು ಬೆಂಕಿ ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Turkey, Syria, earthquake, Death toll, 8000, rescue, efforts, carry on,

Articles You Might Like

Share This Article