ಇಸ್ತಾಂಬುಲ್ ಫೆ.15-ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ 41 ಸಾವಿರ ಗಡಿ ದಾಟಿದೆ.ದಿನ ಕಳೆದಂತೆ ಮೃತರ ಸಂಖ್ಯೆ ಹೆಚ್ಚುತ್ತಿದೆ ಯುದ್ದಪೀಡಿತ ತೀವ್ರ ಕೆಟ್ಟ ಸ್ಥಿತಿಯಲ್ಲಿರುವ ಸಿರಿಯಾದಲ್ಲಿ ಸಾವಿನ ಲೆಕ್ಕ ಸಿಗುತ್ತಿಲ್ಲ. ಅದೃಷ್ಟವೆಂಬಂತೆ ಕಟ್ಟಡ ಅವಶೇಷಗಳಡಿ ಹುದುಗಿಹೋಗಿ 8-9 ದಿನಗಳಾದರೂ ಹಲವರು ಜೀವಂತ ಸಿಕ್ಕಿರುವ ಘಟನೆಗಳು ನಡೆಯುತ್ತಿವೆ.
ಹವಾಮಾನ ವೈಪರಿತ್ಯದ ನಡುವೆಯೂ ರಕ್ಷಣಾ ಕಾರ್ಯಾಚರಣೆಯ ಉತ್ಸಾಹವನ್ನು ತುಸು ಹೆಚ್ಚಿಸಿದೆ. ನಿನ್ನೆ ಕಟ್ಟಡಗಳ ಅವಶೇಷಗಳಡಿಯಲ್ಲಿ 6ಕ್ಕೂ ಹೆಚ್ಚು ಜನರು ಜೀವಂತ ಸಿಕ್ಕಿದ್ದಾರೆ. ಇದರಲ್ಲಿ 65 ವರ್ಷದ ಒಬ್ಬ ವೃದ್ಧ ಹಾಗೂ ಒಬ್ಬ ಪುಟ್ಟ ಬಾಲಕಿಯೂ ಸೇರಿದ್ದಾರೆ.
ಮೊನ್ನೆ ಎಳೆಯ ಮಗುವೊಂದು 5 ದಿನಗಳ ಕಾಲ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜೀವ ಉಳಿಸಿಕೊಂಡು ಕೂತಿದ್ದನ್ನು ಕಂಡು ರÀಕ್ಷಣಾ ಸಿಬ್ಬಂದ್ದಿ ಖುಷಿ ಪಟ್ಟಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪನದಿಂದ 47 ಸಾವಿರ ಕಟ್ಟಡಗಳು ಹಾನಿಗೊಂಡಿವೆ ಎಂದು ಟರ್ಕಿಅಧ್ಯಕ್ಷ ಎರ್ಡೋಗನ್ ಮಾಹಿತಿ ನೀಡಿದ್ದರು.
ಭೂಕಂಪದಿಂದ ಸಂಪೂರ್ಣ ನೆಲಸಮಗೊಂಡಿರುವ ಕಟ್ಟಡಗಳು ಮತ್ತು ಬಹುತೇಕ ಕುಸಿತದ ಹಂತಕ್ಕೆ ಬಂದಿರುವ ಕಟ್ಟಡಗಳು ಈ ಲೆಕ್ಕದಲ್ಲಿವೆ ಎಂದರು ಸಾವಿರಾರು ಜನರು ರೈಲು ಬೋಗಿಗಳಲ್ಲಿ ಆಶ್ರಯ ಪಡೆಯುವಂತಹ ಸ್ಥಿತಿ ಇದೆ.
#Turkey #Syria #Earthquake, Deathtoll,