ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ, 30 ಮಂದಿ ಸಾವು

Social Share

ಆಂಕಾರ,ಅ.15- ಟರ್ಕಿಯ ಕಲ್ಲಿದ್ದಲ ಗಣಿಗಳಲ್ಲಿ ಸ್ಪೋಟ ಸಂಭವಿಸಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಟರ್ಕಿಯ ಉತ್ತರ ವಲಯದ ಬರ್ಟೈನ್ ಪ್ರಾಂತ್ಯದ ಕಪ್ಪು ಸಮುದ್ರ ವ್ಯಾಪ್ತಿಯ ಸಮೀಪ ಇರುವ ಸರ್ಕಾರಿ ಮಾಲೀಕತ್ವದ ಟಿಟಿಕೆ ಹಂಸಾರಾನಗರ ಮುದ್ರುಲೋಗೊ ಗಣಿಯಲ್ಲಿ ಮುಂಜಾನೆ 6.35ರ ಸುಮಾರಿನಲ್ಲಿ ಸ್ಪೋಟ ಸಂಭವಿಸಿದೆ.

ಸುಮಾರು 110ಕ್ಕೂ ಹೆಚ್ಚು ಗಣಿಯೊಳಗೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸ್ಪೋಟದಿಂದಾಗಿ ಬೆಂಕಿಯ ಜ್ವಾಲೆಗಳು ಉರುವಲು ಅನಿಲಕ್ಕೆ ತಾಗಿ ದುರ್ಘಟನೆಯ ತೀವ್ರತೆ ಹೆಚ್ಚಾಗಿದೆ. ಸುಮಾರು 49 ಮಂದಿಯನ್ನು ಸುರಕ್ಷಿತವಾಗಿ ಅಲ್ಲಿಂದ ಹೊರತರಲಾಗಿದೆ. ಬಹಳಷ್ಟು ಮಂದಿ ಸಿಲುಕಿಕೊಂಡಿದ್ದು, ಸರ್ಕಾರದ ಅಧಿಕಾರಿಗಳು ಮತ್ತು ಸಚಿವರು ಎಷ್ಟು ಮಂದಿ ಎಂದು ನಿಖರ ಮಾಹಿತಿ ನೀಡಲು ನಿರಾಕಿರಿಸಿದ್ದಾರೆ.

ಆದರೆ ಆರೋಗ್ಯ ಸಚಿವರ ಹೇಳಿಕೆ ಪ್ರಕಾರ 28 ಮಂದಿ ಸಾವನ್ನಪ್ಪಿದ್ದಾರೆ. ಅಧಿಕೃತವಾಗಿ 22 ಮೃತದೇಹಗಳನ್ನು ಹೊರತೆಗೆಯಲ್ಲಿದೆ. 8 ಶವಗಳನ್ನು ಹೊರತರುವ ಹಂತದಲ್ಲಿದೆ. ಮತ್ತಷ್ಟು ಸಾವುನೋವುಗಳಾಗುವ ಸಾಧ್ಯತೆ ಇದೆ. ಸ್ಪೋಟದ ಹಿನ್ನೆಲೆಯಲ್ಲಿ ಅಧ್ಯಕ್ಷ ರೆಸೆಪ್ ಟ್ಯಾಪಿ ಎರ್ಡೋಗನ್ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪರಿಹಾರ ಕಾರ್ಯದ ನೇರ ನಿಗಾವಣೆಗೆ ಮುಂದಾಗಿದ್ದಾರೆ.

ಸ್ಪೋಟದಿಂದ ಬದುಕುಳಿದ ವ್ಯಕ್ತಿಯೊಬ್ಬರು ನಿಟ್ಟುಸಿರುವ ಬಿಟ್ಟಿದ್ದು, ನಾನು ಆಕಸ್ಮಿಕವಾಗಿ ಹೊರಬಂದೆ. ಕೆಲವೇ ಕ್ಷಣಗಳಲ್ಲಿ ಸ್ಪೋಟ ಸಂಭವಿಸಿದೆ ಎಂದು ಹೇಳಿದ್ದಾರೆ. ಸುತ್ತಮುತ್ತಲಿನವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಣಿಯೊಳಗೆ ಸಿಲುಕಿದವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. 2014ರಲ್ಲಿ ಇದೇ ರೀತಿಯ ದುರ್ಘಟನೆಯಾಗಿ ಟರ್ಕಿಯ ಪಶ್ಚಿಮ ವಯದಲ್ಲಿ 301 ಮಂದಿ ಸಾವನ್ನಪ್ಪಿದ್ದರು.

Articles You Might Like

Share This Article