ಆಮೆ ಬಾಡೂಟ ಮಾಡುತ್ತಿದ್ದ 6 ಮಂದಿ ಅರೆಸ್ಟ್

ಕೊಳ್ಳೇಗಾಲ, ಸೆ.10 -ಇಲ್ಲಿನ ಬಸ್ತಿಪುರ ಬಡಾವಣೆಯ ಕಬಿನಿ ನಾಲೆ ಸಮೀಪದಲ್ಲಿ ಆಮೆಯನ್ನು ಕೊಂದು ಬಾಡುಟ ಮಾಡಿ ಸವಿಯುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ.

ಗುಂಡ್ಲುಪೇಟೆ ಸಮೀಪದ ಮಾಕ್ಕಳ್ಳಿ ಕಲೋನಿಯ ಸುರೇಶ್, ಶಿವಣ್ಣ, ಗಣೇಶ್, ಗಿರೀಶ್, ಕುಮಾರ್, ಶ್ರೀನಿವಾಸ್, ಎಂಬುವರು ಬಂಧಿತರು.

ಬಂಧಿತ ಆರೋಪಿಗಳು ಊರೂರು ತಿರುಗಿ ಶಾಸ್ತ್ರ ಹೇಳಿ ಬದುಕುತ್ತಿದ್ದವರಾಗಿದ್ದು. ಪಟ್ಟಣದ ಸಮೀಪದ ಬಸ್ತಿಪುರ ಗ್ರಾಮದ ಕಬಿನಿ ನಾಲೆಯ ಸಮೀಪದಲ್ಲಿ ಆಮೆಯನ್ನು ಕೊಂದು ಮಾಂಸದಿಂದ ಅಡುಗೆ ತಯಾರಿಸುತ್ತಿದ್ದರು.

ಇದೇ ವೇಳೆ ರೈತ ಮುಖಂಡ ಮಹದೇವ ಅನುಮಾನಸ್ಪದವಾಗಿ ಕಂಡ ಇವರನ್ನು ವಿಚಾರಿಸಿರುವ ವೇಳೆ ಆಮೆ ಕೊಂದು ಅಡುಗೆ ತಯಾರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರಿಸಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಎಚ್ಚೆತ್ತ ಆರ್‍ಎಫ್‍ಒ ಪ್ರವೀಣ್ ರಾಮಪ್ಪ ಛಲವಾದಿ ಅರಣ್ಯ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ದೌಡಾಯಿಸಿ, 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಮೆ ಚಿಪ್ಪು, ಮಾಂಸ ಹಾಗೂ ಮೂಳೆಗಳನ್ನು ಜಪ್ತಿಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.