ಬೆಂಗಳೂರು,ಸೆ.17- ಕೆರೆ ಒತ್ತುವರಿ ಮಾಡಿ ಕೊಂಡಿರುವ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ ಒತ್ತುವರಿ ತೆರವಿನ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ.
ನಗರದಲ್ಲಿ 208 ಕೆರೆಗಳಿವೆ. ಇವುಗಳ ಪೈಕಿ 201 ಕೆರೆಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತವೆ.
ನಮ್ಮ ಅಧಿನದಲ್ಲಿರುವ ಹಲವಾರು ಕೆರೆಗಳು ಸಂಪೂರ್ಣ ಒತ್ತವರಿಯಾಗಿವೆ ಎಂದು ವರು ಒಪ್ಪಿಕೊಂಡಿದ್ದಾರೆ. ಕೆಲವು ಸರ್ಕಾರಿ ಸಂಸ್ಥೆಗಳೇ ಕೆರೆ ಒತ್ತುವರಿ ಮಾಡಿರುವುದು ಗಮನಕ್ಕೆ ಬಂದಿದೆ. ಕೆರೆ ಒತ್ತುವರಿ ಮಾಡಿದ್ದ ಬಿಡಿಎಗೆ ನಾವು ನೋಟೀಸ್ ನೀಡಿದ್ದೇವು. ಅವರಿಂದ ಉತ್ತರ ಬಂದ ನಂತರ ನಮಗೆ ಗೊತ್ತಾಗಿದೆ ಅತಿ ಹೆಚ್ಚು ಕೆರೆ ಒತ್ತುವರಿ ಮಾಡಿರುವುದು ಬಿಡಿಎ ಸಂಸ್ಥೆಯೇ ಎಂದು.
ಇದನ್ನೂ ಓದಿ : ದೊಡ್ಡವರ ಮನೆ ಬಳಿ ಜೆಸಿಬಿಗಳು ಸೈಲೆಂಟ್, ನಾಲ್ಕೇ ದಿನಕ್ಕೆ ಸೀಮಿತವಾಯ್ತು ಬಿಬಿಎಂಪಿ ಪೌರುಷ ಪ್ರದರ್ಶನ
ಬಿಡಿಎ ಮಾತ್ರವಲ್ಲದೆ ಇನ್ನಿತರ ಹಲವಾರು ಸಂಸ್ಥೆಗಳು ಕೆರೆ ಒತ್ತುವರಿ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.