ರಸ್ತೆ ಗುಂಡಿ ಮುಚ್ಚಲು ವಿಫಲರಾಗುವ ಎಂಜಿನಿಯರ್‌ಗಳ ಅಮಾನತು ; ಆಯುಕ್ತರ ಎಚ್ಚರಿಕೆ

Social Share

ಬೆಂಗಳೂರು,ನ.1- ನಿಗತ ಗಡುವಿನೊಳಗೆ ರಸ್ತೆ ಗುಂಡಿ ಮುಚ್ಚಲು ವಿಫಲರಾಗುವ ಎಂಜಿನಿಯರ್‍ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ಎಚ್ಚರಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.10ರೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಎಂಜಿನಿಯರ್‍ಗಳಿಗೆ ಗಡುವು ನೀಡಲಾಗಿದೆ ಎಂದರು.

ನಗರದಲ್ಲಿ ಸಧ್ಯಕ್ಕೆ ಮಳೆ ನಿಂತಿರುವುದರಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಪ್ರತಿನಿತ್ಯ ಒಂದು ಸಾವಿರದಿಂದ ಒಂದೂವರೆ ಸಾವಿರ ಗುಂಡಿ ಮುಚ್ಚುವ ಕಾಮಗಾರಿಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ನವಂಬರ್ ಆರರೊಳಗೆ ನಗರದಲ್ಲಿರುವ ಬಹುಪಾಲು ರಸ್ತೆಗುಂಡಿಗಳನ್ನು ಮುಚ್ಚುವಂತೆ ಎಂಜಿನಿಯರ್‍ಗಳಿಗೆ ಸೂಚನೆ ನೀಡಲಾಗಿದೆ. ಟಾರ್ಗೆಟ್ ಪೂರ್ಣಗೊಳಿಸದವರಿಗೆ ನ.10ರವರೆಗೆ ನೋಟೀಸ್ ನೀಡಿ ಬಾಕಿ ಇರುವ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗುವುದು ಒಂದು ವೇಳೆ 10ನೇ ತಾರೀಖಿನೊಳಗೆ ಗುಂಡಿ ಮುಚ್ಚಲು ಮೀನಾಮೇಷ ಎಣಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.

ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಕೆಲವರು ಕೋರ್ಟ್ ಮೊರೆ ಹೋಗಿರುವುದರಿಂದ ಒತ್ತುವರಿ ತೆರವು ಕಾರ್ಯಚರಣೆಗೆ ಸ್ವಲ್ಪ ಹಿನ್ನಡೆಯಾಗಿದೆ. ಕೋರ್ಟ್‍ನಲ್ಲಿ ನಾವು ನಮ್ಮ ವಾದ ಮಂಡನೆ ಮಾಡುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2.5 ಲಕ್ಷ ಹುದ್ದೆಗಳ ಭರ್ತಿ : ರಾಜ್ಯೋತ್ಸವದಂದು ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

ಆದರೂ ಖಾಲಿ ಜಾಗಗಳು ಹಾಗೂ ಕಂಪೌಂಡ್‍ಗಳಿರುವ ಪ್ರದೇಶಗಳ ಒತ್ತುವರಿ ತೆರವು ಕಾರ್ಯಚರಣೆ ಮುಂದುವರೆಸಿದ್ದೇವೆ. ಜೊತೆಗೆ ನಮಗೆ ಒತ್ತುವರಿ ಗುರುತು ಮಾಡಲು ಸರ್ವೆಯರ್ಸ್ ಕೊರತೆ ಇದೆ ಎನ್ನುವುದನ್ನು ಆಯುಕ್ತರು ಒಪ್ಪಿಕೊಂಡರು.

ಇದುವರೆಗೂ ನಾವು ಮಹಾದೇವ ಪುರ ವಲಯದಲ್ಲಿ ತೆರವು ಕಾರ್ಯಚಾರಣೆ ನಡೆಸಿದ್ವಿ ಇದೀಗ ಬೇರೆ ಬೇರೆ ವಲಯಗಳಲ್ಲಿಯೂ ಒತ್ತುವರಿ ಆಗಿರೋದು ಕಂಡು ಬಂದಿದ್ದು, ಶೀಘ್ರದಲ್ಲೇ ಅಲ್ಲಿಯೂ ಒತ್ತುವರಿ ತೆರವು ಕಾರ್ಯಚರಣೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹಿಂದಿ ಹೇರಿಕೆ ಕುರಿತು ಬೊಮ್ಮಾಯಿ-ರಿಜ್ವಾನ್ ನಡುವೆ ‘ಭಾಷಣ ಬಡಿದಾಟ’

Articles You Might Like

Share This Article