ಇಬ್ಬರು ಆರೋಪಿಗಳ ಬಂಧನ : 7 ಲಕ್ಷ ಮೌಲ್ಯದ 40 ಮೊಬೈಲ್‍ಗಳು ವಶ

Social Share

ಬೆಂಗಳೂರು,ಅ.24- ಒಬ್ಬಂಟಿಯಾಗಿ ಹೋಗುವ ಸಾರ್ವಜನಿರನ್ನು ಅಡ್ಡಗಟ್ಟಿ ಮೊಬೈಲ್‍ಗಳನ್ನು ದೋಚುತ್ತಿದ್ದ ಹಾಗೂ ಆರೋಪಿಯಿಂದ ಕಳವು ಮಾಲನ್ನು ಖರೀದಿಸುತ್ತಿದ್ದ ಇಬ್ಬರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 7 ಲಕ್ಷ ರೂ. ಮೌಲ್ಯದ 40 ವಿವಿಧ ಕಂಪನಿಯ ಮೊಬೈಲ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಆರೋಪಿ ಸಜ್ಜದ್ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ ಅವರ ಮೊಬೈಲ್ ಫೋನ್‍ಗಳನ್ನು ದೋಚುತ್ತಿದ್ದನು.

ನಂತರ ಬಸವೇಶ್ವರನಗರ ಮೊಬೈಲ್ ಸರ್ವೀಸ್ ಅಂಗಡಿ ಇಟ್ಟುಕೊಂಡಿದ್ದ ಅರುಣ್‍ನಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ತಮ್ಮ ಮೋಜು ಮಸ್ತಿಗಾಗಿ ಬಳಸಿಕೊಳ್ಳುತ್ತಿದದ್ದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳ ಬಂಧನದಿಂದ ಕೋರಮಂಗಲ ಪೊಲೀಸ್ ಠಾಣೆಯ ಒಂದು ಪ್ರಕರಣ, ಮಡಿವಾಳ 2 ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಒಂದು ಪ್ರಕರಣ ಪತ್ತೆಯಾಗಿವೆ. ಒಬ್ಬಂಟಿಯಾಗಿ ಹೋಗುವ ಸಾರ್ವಜನಿಕರಿಂದ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಪತ್ತೆ ಮಾಡುವ ಸಲುವಾಗಿ ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಅವರು ವಿಶೇಷ ತಂಡವನ್ನು ರಚಿಸಿದ್ದರು.

ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಲಕ್ಷ್ಮಿನಾರಾಯಣ ಅವರ ನೇತೃತ್ವದಲ್ಲಿ ಕೋರಮಂಗಲ ಠಾಣೆ ಇನ್‍ಸ್ಪೆಕ್ಟರ್ ನಟರಾಜ್, ಪಿಎಸ್‍ಐ ಅರುಣ್‍ಕುಮಾರ್, ಎಎಸ್‍ಐ ರವೀಂದ್ರಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

11 ಸ್ಯಾಮಸಂಗ್ ಮೊಬೈಲ್, 9 ವಿವೋ, 7 ರೆಡ್‍ಮೀ, 3 ಒನ್‍ಪ್ಲಸ್ ಮೊಬೈಲ್‍ಗಳು, 2 ರಿಯಲ್‍ಮೀ, 2 ಪೊಕೊ ಹಾಗೂ ಇನ್‍ಫಿನಿಕ್ಸ್ , ಐಫೋನ್, ನೋಕಿಯಾ, ಮೋಟೊ, ಹುವಾಯಿನೆಕ್ಸಸ್ ಹಾಗೂ ಗೂಗಲ್ ಪಿಕ್ಸೆಲ್ ತಲಾ ಒಂದು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಂಸಿರುತ್ತಾರೆ.

Articles You Might Like

Share This Article