ಮಾರಣಾಂತಿಕವಾಗಿ ಚಾಕುವಿನಿಂದ ಚುಚ್ಚಿ ದರೋಡೆ ಮಾಡಿದ್ದ ಇಬ್ಬರ ಸೆರೆ

Social Share

ಬೆಂಗಳೂರು,ಫೆ.23- ಹಣಕ್ಕಾಗಿ ಪಾದಚಾರಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಕರುಳು ಹೊರಬರುವಂತೆ ಚುಚ್ಚಿ ಜೇಬಿನಲ್ಲಿದ್ದ ಒಂದು ಸಾವಿರ ಹಣ ತೆಗೆದುಕೊಂಡು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 1.50 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ತುಮಕೂರಿನ ಕುಣಿಗಲ್ ತಾಲ್ಲೂಕು, ಹುತ್ರಿದುರ್ಗ ಹೋಬಳಿಯ ಕೃಷ್ಣ (26) ಮತ್ತು ನಿರಂಜನ್ (25) ಬಂಧಿತ ದರೋಡೆಕೋರರು. ಇವರಿಬ್ಬರು ಬೆಂಗಳೂರಿನ ಸುಂಕದಕಟ್ಟೆಯ ಹೊಯ್ಸಳ ನಗರದ ಪೈಪ್‍ಲೈನ್ ರಸ್ತೆಯಲ್ಲಿ ವಾಸವಾಗಿದ್ದಾರೆ.

ಮಂಡ್ಯದಲ್ಲಿ ಭೀಕರ ಕೊಲೆ, ಬೆಚ್ಚಿಬಿದ್ದ ಜನ

ಫೆ.12ರಂದು ಸುಂಕದಕಟ್ಟೆಯ ವಿಶ್ವೇಶ್ವರ ನಗರದ ಅರುಣೋ ದಯ ಶಾಲೆ ಬಳಿ ಶಿವಣ್ಣ ಎಂಬು ವವರು ನಡೆದು ಹೋಗುತ್ತಿದ್ದಾಗ ಇವರನ್ನು ಹಿಂಬಾಲಿಸಿಕೊಂಡು ಹೋದ ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕು ವಿನಿಂದ ಕರುಳು ಹೊರಬರುವಂತೆ ಚುಚ್ಚಿ ಅವರ ಜೇಬಿನಲ್ಲಿದ್ದ ಒಂದು ಸಾವಿರ ಹಣ ತೆಗೆದುಕೊಂಡು ಪರಾರಿಯಾಗಿದ್ದರು.

ಚಾಕು ಇರಿತದಿಂದ ಶಿವಣ್ಣ ಅವರು ಗಂಭೀರ ಗಾಯ ಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಈ ತಂಡ ಕೃತ್ಯ ನಡೆದ ಸ್ಥಳದಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.

AIDMK ಮುಖ್ಯಸ್ಥರಾಗಿ ಪಳನಿಸ್ವಾಮಿ ಮುಂದುವರಿಕೆ

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಹಾಗೂ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನ ಹಾಗೂ ಅದರಲ್ಲಿದ್ದ ಡ್ರ್ಯಾಗರ್ ಮತ್ತು ಸುಲಿಗೆ ಮಾಡಿದ್ದ 200ರೂ. ವಶಪಡಿಸಿಕೊಂಡು
ಹೆಚ್ಚಿನ ವಿಚಾರಣೆಗೊಳ ಪಡಿಸಿದ್ದಾರೆ.

ಹಾವೇರಿ : ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಆರೋಪಿಗಳು ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿ ಮಾರಾಟ ಮಾಡಲು ನಿಲ್ಲಿಸಿದ್ದ ಹೋಂಡಾ ಡಿಯೋ ದ್ವಿಚಕ್ರ ವಾಹನ ಹಾಗೂ ಹೋಂಡಾ ಫ್ಯಾಷನ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಲೋಹಿತ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

two arrest, stabbing, robbery,

Articles You Might Like

Share This Article