ಇಬ್ಬರ ಸೆರೆ : 6 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನ. 9 ಮೊಬೈಲ್‍ ಜಪ್ತಿ

Social Share

ಬೆಂಗಳೂರು, ಜು.27- ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 10 ದ್ವಿಚಕ್ರವಾಹನಗಳು ಹಾಗೂ ವಿವಿಧ ಕಂಪೆನಿಯ 9 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಗರಭಾವಿ ಎನ್‍ಜಿಇಎಫ್ ಲೇಔಟ್ ನಿವಾಸಿ ಗಣೇಶ್ (22) ಮತ್ತು ವಿನಾಯಕ ಲೇಔಟ್‍ನ ಮಾದೇಶ (23) ಬಂಧಿತರು.
ಜು.16ರಂದು ರಾತ್ರಿ ಶೈಲೇಶ್ ಪರ್ಸಾನಿಯಾ ಎಂಬುವರು ತಮ್ಮ ಮನೆ ಮುಂದೆ 50 ಸಾವಿರ ಬೆಲೆಯ ಹೊಂಡಾ ಆಕ್ಟೀವಾ ಸ್ಕೂಟರ್ ನಿಲ್ಲಿಸಿದ್ದಾಗ ಕಳವಾಗಿತ್ತು.

ಈ ಬಗ್ಗೆ ಅವರು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ, ವಿಚಾರಣೆಗೊಳಪಡಸಿ ವಿವಿಧ ರೀತಿಯ 10 ದ್ವಿಚಕ್ರ ವಾಹನಗಳು ಹಾಗೂ 9 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 6 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಆರೋಪಿಗಳ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಬಾಗಲಗುಂಟೆ, ಕಾಮಾಕ್ಷಿಪಾಳ್ಯ, ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 6 ವಾಹನಗಳು ಹಾಗೂ 9 ಮೊಬೈಲ್ ಫೋನ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ಇನ್ಸ್‍ಪೆಕ್ಟರ್ ಲೋಹಿತ್, ಪಿಎಸ್ ಚಂದ್ರಶೇಖರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

Articles You Might Like

Share This Article