ಬೆಂಗಳೂರು, ಜು.9- ಪಾರ್ಕ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸದಾಶಿವ ನಗರ ಠಾಣೆ ಪೊಲೀಸರು ಬಂಧಿಸಿ 2 ಕೆಜಿ, 180 ಗ್ರಾಂ ತೂಕದ ಗಾಂಜಾ ಹಾಗೂ 800 ನಗದು, ಮೊಬೈಲ್ ಫೋನ್‍ನ್ನು ವಶಪಡಿಸಿಕೊಂಡಿದ್ದಾರೆ.
ಒಡಿಸ್ಸಾ ರಾಜ್ಯದ ಮಹಾ ಪಾತ್ರ ಮತ್ತು ಛತ್ತೀಸ್‍ಗಡ ರಾಜ್ಯದ ರೋಲಾಕ್ ಸಿಂಗ್ ಬಂತ ಆರೋಪಿಗಳು. ಇವರುಗಳಿಂದ ತೂಕದ ಯಂತ್ರ, 50 ಗ್ರಾಂ ತೂಕವಿರುವ ಗಾಂಜಾ ಪಟ್ಟಣಗಳು, ಕೆಂಪು ಬಣ್ಣದ ಬ್ಯಾಗ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಕೊಳ್ಳಲಾಗಿದೆ.
ಆರೋಪಿಗಳು ಅಚ್ಚಯ್ಯಶೆಟ್ಟಿ ಲೇಔಟ್‍ನ ಬಳಿಯ ರಮಣ ಮಹರ್ಷಿ ಪಾರ್ಕ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಸದಾಶಿವ ನಗರ ಠಾಣೆ ಪೊಲೀಸರಿಗೆ ಬಂದಿದೆ.
ನಂತರ ಪೊಲೀಸರು ದಾಳಿ ಮಾಡಿ ಈ ಇಬ್ಬರು ಆರೋಪಿಗಳನ್ನು ಹಾಗೂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖಗೆ ಮುಂದುವರೆದಿದೆ.