ಹಾಲಿನ ಬೂತ್ ಮತ್ತು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

Social Share

ಬೆಂಗಳೂರು,ನ.15-ಹಾಲಿನ ಬೂತ್ ಮತ್ತು ಮನೆ ಕಳ್ಳತನ ಮಾಡಿ ಹಣ, ಆಭರಣ ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಕ್ಸೂದ್ ಖಾನ್, ಫರಾಜ್ ಅಹಮ್ಮದ್ ಬಂತ ಆರೋಪಿಗಳು. ಇವರಿಬ್ಬರು ಸೇರಿಕೊಂಡು ನಗರದ ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ವಸಂತನಗರದ ಮೂರನೇ ಕ್ರಾಸ್‍ನಲ್ಲಿರುವ ಹಾಲಿನ ಬೂತ್‍ನ ಬೀಗ ಒಡೆದು ಕಳ್ಳತನ ಮಾಡಿರುವ ಬಗ್ಗೆ ಹಾಗೂ ತಿಮ್ಮಯ್ಯ ರಸ್ತೆಯಲ್ಲಿರುವ ರೈಲ್ವೆ ಕ್ವಾಟರ್ಸ್‍ನ ಮನೆಯೊಂದರ ಬೀಗ ಒಡೆದು ಕಳ್ಳತನ ಮಾಡಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

ಆರೋಪಿಗಳ ಬಂಧನದಿಂದ ಹ್ರೈಗ್ರೌಂಡ್ಸ್ ಠಾಣೆಯ 2 ಪ್ರಕರಣಗಳು, ಮಹಾಲಕ್ಷ್ಮಿಪುರ, ವಯಾಲಿಕಾವಲ್ ಹಾಗೂ ಶೇಷಾದ್ರಿಪುರಂ ಠಾಣೆಯ ತಲಾ ಒಂದು ಪ್ರಕರಣಗಳು ಸೇರಿದಂತೆ 5 ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಯಿಂದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಒಂದು ಸ್ಕೂಟರ್, ಬೀಗ ಒಡೆಯಲು ಬಳಸುತ್ತಿದ್ದ ಕಬ್ಬಿಣದ ರಾಡ್‍ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸರ್ಕಾರ – ಕೆಎಂಎಫ್ ನಡುವೆ ಸಮನ್ವಯ ಕೊರತೆ

ಹೈಗ್ರೌಂಡ್ ಠಾಣೆಯ ಇನ್‍ಸ್ಪೆಕ್ಟರ್ ಶಿವಸ್ವಾಮಿ ಅವರ ನೇತೃತ್ವದ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದೆ.

Articles You Might Like

Share This Article