ಮೋಜು- ಮಸ್ತಿಗಾಗಿ ಕಳ್ಳತನಕ್ಕಿಳಿದಿದ್ದ ಇಬ್ಬರು ಅಂದರ್

Social Share

ಬೆಂಗಳೂರು, ನ.26- ಮೋಜು-ಮಸ್ತಿಗಾಗಿ ದ್ವಿಚಕ್ರ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್ ಹಾಗೂ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಇಬ್ಬರನ್ನು ವಿದ್ಯಾರಣ್ಯ ಪುರ ಠಾಣೆ ಪೊಲೀಸರು ಬಂಧಿಸಿ 6.87 ಲಕ್ಷ ರೂ. ಬೆಲೆಬಾಳುವ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರ ನಿವಾಸಿಗಳಾದ ರಂಜಿತ್ ಅಲಿಯಾಸ್ ಸಂತು ಅಲಿಯಾಸ್ ಕರಿಯಾ ಅಲಿಯಾಸ್ ಪುಟ್ಟ(27) ಮತ್ತು ಅಜಿತ್(25) ಬಂಧಿತರು. ವಿದ್ಯಾರಣ್ಯ ಪುರದ ದೇಶಬಂಧು ನಗರ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಮನೆಯಲ್ಲಿ 20 ಸಾವಿರ ಬೆಲೆಯ ವಿವೋ ಕಂಪೆನಿಯ ಮೊಬೈಲ್ 70 ಸಾವಿರ ಬೆಲೆಯ ಲ್ಯಾಪ್‍ಟಾಪ್ ಕಳ್ಳತನವಾಗಿರುವ ಬಗ್ಗೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಬಿಬಿಎಂಪಿ ಆಂತರಿಕ ತನಿಖೆಯಲ್ಲೂ ಬಯಲಾಯ್ತು ‘ಚಿಲುಮೆ’ ಅಕ್ರಮ

ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ಯಶವಂತಪುರ, ನಂದಿನಿಲೇಔಟ್, ಸಂಜಯ್ ನಗರ, ಮತ್ತಿಕೆರೆ, ಹೆಬ್ಬಾಳ ವ್ಯಾಪ್ತಿಗಳಲ್ಲಿ ಮನೆಗಳ್ಳತನ ದ್ವಿಚಕ್ರ ವಾಹನ, ಲ್ಯಾಪ್‍ಟಾಪ್, ಮೊಬೈಲ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಹಾಗೂ ಈಗಾಗಲೇ ಪೀಣ್ಯಾ, ಯಶವಂತಪುರ, ಜಾಲಹಳ್ಳಿ, ಸುಬ್ರಮಣ್ಯನಗರ, ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ, ದರೋಡೆ, ಎನ್‍ಡಿಪಿಎಸ್ ಕಾಯ್ದೆ ಪ್ರಕರಣಗಳಲ್ಲಿ ಬಾಗಿಯಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ ಹಾಗೂ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ತಲಾ 2 ಪ್ರಕರಣಗಳು, ಯಶವಂತಪುರ, ನಂದಿನಿಲೇಔಟ್ ಹಾಗೂ ಸಂಜಯ್‍ನಗರ ಠಾಣೆಯ ತಲಾ 1 ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿವೆ.

ಚಂದ್ರನ ಅಂಗಳದಲ್ಲಿ ಪರಮಾಣು ಶಕ್ತಿ ಚಾಲಿತ ನೆಲೆ ಸ್ಥಾಪಿಸಲಿದೆ ಚೀನಾ

ಆರೋಪಿಗಳಿಂದ ಸುಮಾರು 2.80 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳು, 1.40 ಲಕ್ಷ ರೂ. ಬೆಲೆಬಾಳುವ 3 ಲ್ಯಾಪ್‍ಟಾಪ್‍ಗಳು, 1.35 ಲಕ್ಷ ಮೌಲ್ಯದ ವಿವಿಧ ಕಂಪೆನಿಯ 9 ಮೊಬೈಲ್‍ಗಳು, 1.32 ಲಕ್ಷ ಬೆಲೆಬಾಳುವ ಒಂದು ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯದ ಬಗ್ಗೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Two, arrested, mobiles, laptops, seized,

Articles You Might Like

Share This Article