ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಇಬ್ಬರ ಸೆರೆ

Social Share

Two, arrested, murder, man,

ಬೆಂಗಳೂರು,ಜು.18- ಅಪ್ರಾಪ್ತೆಯ ಮೊಬೈಲ್‍ಗೆ ಮೆಸೇಜ್ ಕಳುಹಿಸಿದನೆಂಬ ಕಾರಣಕ್ಕೆ ಬುದ್ದಿವಾದ ಹೇಳುವ ನೆಪದಲ್ಲಿ ಯುವಕನನ್ನು ಕರೆಸಿಕೊಂಡು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಇಬ್ಬರನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗೇಂದ್ರ ಮತ್ತು ರಂಗಸ್ವಾಮಿ ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಇನ್ನಿಬ್ಬರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಆರೋಪಿ ನಾಗೇಂದ್ರನ ವಿರುದ್ಧ 2010ರಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇದೀಗ ಮತ್ತೆ ಪ್ರಜ್ವಲ್ ಪ್ರಕರಣದಲ್ಲಿ ಭಾಗಿಯಾಗಿ ಬಂತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಾಗೇಂದ್ರನ ಅಣ್ಣನ ಮಗಳ ಮೊಬೈಲ್ ನಂಬರನ್ನು ಗೆಳೆಯನಿಂದ ಪ್ರಜ್ವಲ್ ಪಡೆದುಕೊಂಡು ಮೆಸೇಜ್ ಕಳುಹಿಸಿದ್ದನು. ಈ ವಿಷಯವನ್ನು ಆಕೆ ತನ್ನ ಮನೆಯಲ್ಲಿ ತಿಳಿಸಿದ್ದಾಳೆ.

ಅಣ್ಣನ ಮಗಳಿಗೆ ಮೆಸೇಜ್ ಕಳುಹಿಸಿರುವ ವಿಷಯ ತಿಳಿದ ಚಿಕ್ಕಪ್ಪ ನಾಗೇಂದ್ರ, ಬುದ್ದಿಮಾತು ಹೇಳುವ ನೆಪದಲ್ಲಿ ಸ್ನೇಹಿತ ವಿಷ್ಣು ಎಂಬಾತನ ಮುಖಾಂತರ ಪ್ರಜ್ವಲ್‍ನನ್ನು ಕಳೆದ ಶುಕ್ರವಾರ ರಾತ್ರಿ 10.30ರ ಸುಮಾರಿನಲ್ಲಿ ಮೆಟ್ರೋ ನಿಲ್ದಾಣದ ಬಳಿ ಕರೆಸಿಕೊಂಡು ಇನ್ನಿತರರ ಜೊತೆ ಸೇರಿಸಿಕೊಂಡು ದೊಣ್ಣೆಯಿಂದ ತಲೆ ಇನ್ನಿತರ ಭಾಗಗಳಿಗೆ ಹೊಡೆದು ಪರಾರಿಯಾಗಿದ್ದರು.

ಗಂಭೀರ ಗಾಯಗೊಂಡಿದ್ದ ಪ್ರಜ್ವಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು , ಇಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Articles You Might Like

Share This Article