ಕದ್ದ ಬೈಕ್‍ ಬಳಸಿ ಸರಗಳ್ಳತನ ಇಬ್ಬರ ಬಂಧನ

Social Share

ಬೆಂಗಳೂರು, ಸೆ.29- ಕದ್ದ ದ್ವಿಚಕ್ರ ವಾಹನವನ್ನೇ ಬಳಸಿಕೊಂಡು ಸರಗಳ್ಳತನ ಮಾಡಿದ್ದ ಇಬ್ಬರು ಸರಗಳ್ಳರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮೃತಳ್ಳಿಯ ಮೊಹಮ್ಮದ್ ಸಲ್ಮಾನ್(23) ಮತ್ತು ಯಲಹಂಕದ ಜಿಶಾನ್ ಖಾನ್ (25) ಬಂಧಿತರು.

ಸೆ. 10ರಂದು ಸಂಜೆ 4 ಗಂಟೆ ಸುಮಾರಿನಲ್ಲಿ ಬೆಂಗಳೂರು- ಬಳ್ಳಾರಿ ಸರ್ವಿಸ್ ರಸ್ತೆ, ಕನ್ನಮಂಗಲ ಗೇಟ್, ಓಝೋನ್ ಅಪಾರ್ಟಮೆಂಟ್ ಹತ್ತಿರ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕೆಟಿಎಂ ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಮೂವರು ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಪ್ರಕರಣದ ತನಿಖೆ ಕೈಗೊಂಡ ದೇವನಹಳ್ಳಿ ಪೊಲೀಸರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಸುಲಿಗೆ ಮಾಡಿರುವುದು ಹಾಗೂ ಸಂಪಿಗೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ದೇವನಹಳ್ಳಿ ಠಾಣೆ ಪಿಎಸ್‍ಐ ಉಮೇಶ್ ಹಾಗೂ ಎಎಸ್‍ಐ ಸಕರೆಪ್ಪ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article