ಕೋಲ್ಕತ್ತಾದಲ್ಲಿ ಡ್ರೋನ್ ಬಳಸಿದ ಇಬ್ಬರು ಬಾಂಗ್ಲಾದೇಶೀಯರ ಬಂಧನ

Social Share

ಕೋಲ್ಕತ್ತಾ, ಆಗಸ್ಟï 12 – ಡ್ರೋನ್ ಮೂಲಕ ಇಲ್ಲಿನ ವಿಕ್ಟೋರಿಯಾ ಸ್ಮಾರಕ ಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಛಾಯಾಚಿತ್ರಗಳನ್ನು ಸೆರೆಹಿಡಿದ ಆರೋಪದ ಮೇಲೆ ಇಬ್ಬರು ಬಾಂಗ್ಲಾದೇಶೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮ್ಯೂಸಿಯಂನ ಭದ್ರತೆಯಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಹೇಸ್ಟಿಂಗ್ಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಕಾರ್ಯಾಚರಣೆ ಕೈಗೊಂಡು ಬಾಂಗ್ಲಾದೇಶದ ಇಬ್ಬರನ್ನು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಕಾಂಪೌಂಡ್‍ನಲ್ಲಿ ಬಂಧಿಲಾಗಿದೆ.

ಆರಂಭಿಕ ತನಿಖೆಯಲ್ಲಿ ಇಬ್ಬರು ಬಾಂಗ್ಲಾದೇಶಿಗಳು ಮಾನವರಹಿತ ವೈಮಾನಿಕ ವಾಹನ ಡ್ರೋನ್ ಬಳಸಿ ಅವರು ಸ್ಮಾರಕ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿ ಸೇನೆಯ ಪೂರ್ವ ಕಮಾಂಡ್ ಪ್ರಧಾನ ಕಛೇರಿಯೂ ಇದೆ ಇಬ್ಬರು ಬಾಂಗ್ಲಾದೇಶೀಯರನ್ನು ಆಗಸ್ಟ 23 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅವರು ವಿಮಾನ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ.

ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ಡ್ರೋನ್ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ ಏಕೆಂದರೆ ಇದು ಡ್ರೋನ್ ರಹಿತ ವಲಯವಾಗಿದೆ ಮತ್ತು ರಕ್ಷಣಾ ಪ್ರದೇಶದಲ್ಲಿಯೂ ಬರುತ್ತದೆ. ಅಂತಹ ಯಾವುದೇ ಮಾನವರಹಿತ ವೈಮಾನಿಕ ವಾಹನವನ್ನು ಚಲಾಯಿಸಲು, ಒಬ್ಬರು ವಿಶೇಷ ಅನುಮತಿಯನ್ನು ಪಡೆಯಬೇಕು. ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.

ವಿಕ್ಟೋರಿಯಾ ಮೆಮೋರಿಯಲ್ ಹಾಲ, ವಿಕ್ಟೋರಿಯಾ ರಾಣಿಯ ನೆನಪಿಗಾಗಿ ಲಾರ್ಡ್ ಕರ್ಜನ್ 1906-1921 ರ ನಡುವೆ ನಿರ್ಮಿಸಿದ ಭವ್ಯವಾದ ಮಕ್ರಾನಾ ಮಾರ್ಬಲ್ ಕಟ್ಟಡವಾಗಿದೆ, ಇದು ಕೇಂದ್ರ ಸಂಸ್ಕøತಿ ಸಚಿವಾಲಯದ ಅಡಿಯಲ್ಲಿ ಒಂದು ವಸ್ತು ಸಂಗ್ರಹಾಲಯವಾಗಿದೆ.

Articles You Might Like

Share This Article