ಸೋಮಾಲಿಯಾ : ಕಾರ್ ಬಾಂಬ್‍ ಸ್ಪೋಟಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

Social Share

ಮೊಗಾಡಿಶು,ಅ.30-ಜನನಿಬಿಡ ಪ್ರದೇಶದಲ್ಲಿ ಎರಡು ಕಾರ್ ಬಾಂಬ್‍ಗಳು ಸ್ಪೋಟಿಸಿದ್ದರಿಂದ ಕನಿಷ್ಟ 100ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿರುವ ಘಟನೆ ವರದಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಸೋಮಾಲಿಯದ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಹೇಳಿಕೆ ನೀಡಿದ್ದು, ಘಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಷಾದಿಸಿದ್ದಾರೆ.

ಅಲ್ ಖೈದಾ ಸಂಪರ್ಕಿತ ಶಹಭಾದ್ ತೀವ್ರವಾದಿ ಗುಂಪು ಈ ಘಟನೆ ನಡೆಸಿರುವ ಸಾಧ್ಯತೆ ಇದೆ ಎಂದು ಸೋಮಾಲಿಯ ಸರ್ಕಾರ ದೂರಿದೆ. ಆದರೆ ಆರೋಪಿತ ಗುಂಪು ಯಾವುದೇ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ. ಸೊಮಾಲಿಯ ರಾಜಧಾನಿಯ ಆಯಕಟ್ಟಿನ ಸ್ಥಳಗಳಲ್ಲಿ ನಡೆದ ಈ ದಾಳಿಯಿಂದ ಸಾವುನೋವುಗಳು ಹೆಚ್ಚಾಗಿದೆ. ನಾಗರೀಕರನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.

ಮಲ್ಲೇಶ್ವರಂ ಶಾಲಾ ಮಾದರಿ ಇಡೀ ರಾಜ್ಯಕ್ಕೆ ವಿಸ್ತರಣೆ : ಸಿಎಂ

ದೇಶದಲ್ಲಿ ಬಹುದೊಡ್ಡ ಭಾಗವಾಗಿರುವ ತೀವ್ರವಾದಿಗಳು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಅವರನ್ನು ಹತ್ತಿಕ್ಕಲು ಸರ್ಕಾರ ನಾನಾ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

Articles You Might Like

Share This Article