ಬೆಂಗಳೂರು, ಜ.16- ಖಾಸಗಿ ಕಂಪೆನಿ ನೌಕರನ ಬ್ಯಾಗ್ನಲ್ಲಿ ಗಾಂಜಾ ಇಟ್ಟು 2500 ರೂ. ಹಣ ಕಿತ್ತುಕೊಂಡಿದ್ದ ಇಬ್ಬರು ಕಾನ್ಸ್ಸ್ಟೇಬಲ್ಗಳನ್ನು ಡಿಸಿಪಿ ಸಿ.ಕೆ. ಬಾಬಾ ಅವರು ಅಮಾನತ್ತು ಮಾಡಿದ್ದಾರೆ.
ವೈಭವ್ ಪಾಟೀಲ್ ಎಂಬುವರು ತಮಗಾದ ನೋವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದರು. ಈತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದರು. ಅದರನ್ವಯ ಮೇಲ್ನೋಟಕ್ಕೆ ಇಬ್ಬರು ಕಾನ್ಸ್ಸ್ಟೇಬಲ್ಗಳು ಕರ್ತವ್ಯ ಲೋಪವೆಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತು ಮಾಡಲಾಗಿದೆ.
ಈ ಬಾರಿ ಬೆಂಗಳೂರು ಇತಿಹಾಸ ತಿಳಿಸುವ ಫಲಪುಷ್ಪ ಪ್ರದರ್ಶನ : ಸಚಿವ ಮುನಿರತ್ನ
ಘಟನೆ ವಿವರ: ವೈಭವ್ ಪಾಟೀಲ್ ಆರು ತಿಂಗಳ ಹಿಂದೆ ಹಿಮಾಚಲಪ್ರದೇಶದಿಂದ ನಗರಕ್ಕೆ ಬಂದು ಎಚ್ಎಸ್ಆರ್ ಲೇಔಟ್ನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಕಳೆದ ಮೂರು ದಿನಗಳ ಹಿಂದೆ ವೈಭವ್ ಪಾಟೀಲ್ನನ್ನು ಕೆಲಸ ಮುಗಿಸಿಕೊಂಡು ರ್ಯಾಪಿಡೋ ಬೈಕ್ ಟ್ಯಾಕ್ಸಿಯಲ್ಲಿ ಹೋಗಲು ನಿಂತಿದ್ದಾಗ ಇಬ್ಬರು ಕಾನ್ಸ್ಸ್ಟೇಬಲ್ಗಳು ಇವರ ಬಳಿ ಬಂದಿದ್ದಾರೆ. ಒಬ್ಬರು ಬ್ಯಾಗ್ ತಪಾಸಣೆ ಮಾಡಬೇಕೆಂದು ಹೇಳಿ ಬ್ಯಾಗ್ ಪಡೆದುಕೊಂಡಿದ್ದಾರೆ.
ಮತ್ತೊಬ್ಬ ಕಾನ್ಸ್ಸ್ಟೇಬಲ್ ಎಲ್ಲಿ ಕೆಲಸ ಮಾಡುತ್ತಿದ್ದೆ ಎಂದು ವೈಭವ್ ಪಾಟೀಲ್ ಅವರನ್ನು ಪ್ರಶ್ನೆ ಮಾಡುತ್ತಾ ನೀನು ಗಾಂಜಾ ಸೇವಿಸುತ್ತಿದ್ದೀಯಾ ಎಂದು ಕೇಳಿದ್ದಾರೆ. ಗಾಂಜಾ ಸೇವಿಸುವುದಿಲ್ಲ ಎಂದು ಹೇಳುತ್ತಿದ್ದಂತೆ ಬ್ಯಾಗ್ನಿಂದ ಗಾಂಜಾ ಪೊಟ್ಟಣ ಹೊರತೆಗೆದಂತೆ ನಾಟಕವಾಡಿ ನೀನು ಗಾಂಜಾ ಸೇವಿಸುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಭದ್ರತೆ ಲೆಕ್ಕಿಸದೆ ಮಹಿಳಾ ಕಾರ್ಯಕರ್ತರ ಕೈ ಕುಲುಕಿದ ಪ್ರಿಯಾಂಕಾ
ನೀನು ಒಪ್ಪಿಕೊಳ್ಳದಿದ್ದರೆ ನಿನ್ನನ್ನು ಬಂಧಿಸುವುದಾಗಿ ಹೇಳಿ 2500 ರೂ. ಕಿತ್ತುಕೊಂಡಿದ್ದಾರೆ. ಈ ಬಗ್ಗೆ ವೈಭವ್ ಪಾಟೀಲ್ ಅವರು ತನಗಾದ ನೋವಿನ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು. ಅದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಅವರ ನೆರವಿಗೆ ದಾವಿಸಿ ಅಧಿಕೃತವಾಗಿ ಹೇಳಿಕೆ ಪಡೆದು ಇದೀಗ ಇಬ್ಬರು ಕಾನ್ಸ್ಸ್ಟೇಬಲ್ಗಳನ್ನು ಅಮಾನತು ಮಾಡಿದ್ದಾರೆ.
two, constables, suspended, Bengaluru,