ಕೆನಡಾ ವಿಮಾನ ನಿಲ್ದಾಣ ಬಳಿ ಸ್ಪೋಟಕ ಪತ್ತೆ : ಇಬ್ಬರ ಬಂಧನ

Social Share

ಟೊರೊಂಟೊ.ಅ,23- ಕೆನಡಾದ ಟೊರೊಂಟೊ ಹೊರ ವಲಯದ ಬಿಷಪ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಳಿ ಸ್ಪೋಟಕ ಸಾಧನ ಪತ್ತೆಯಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಥಿಯಾಗಿದೆ.

ವಿಮಾನಗಳ ಹಾರಾಟ ಸ್ಥಗಿತಗೊಳಿಸಿ ಪ್ರಯಾಣಿಕರನ್ನು ಹೊರಗೆಕಳಿಸಲಾಯಿತು ,ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್ ಬಳಿ ಸಂಭಾವ್ಯ ಸೋಟಕ ಸಾಧನವನ್ನು ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಟೊರೊಂಟೊ ನಗರದ ಸಮೀಪದಲ್ಲಿರುವ ಎರಡನೇ ವಿಮಾನ ನಿಲ್ದಾಣವನ್ನು ಹೆಚಾಗಿ ದೇಶೀಯ ವಿಮಾನ ಹಾರಾಟಕ್ಕೆ ಬಳಸಲಾಗುತ್ತದೆ ಪೋರ್ಟರ್ ಏರ್‍ಲೈನ್ಸ್ , ಏರ್ ಕೆನಡಾ ಸೇರಿ ಕೆಲ ಪ್ರಾದೇಶಿಕ ವಿಮಾನಗಳು ಇಲ್ಲಿಂದ ಹಾರಾಟ ನಡೆಸುತ್ತದೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ಸದ್ಯ ರನ್‍ವೇಯನ್ನು ಮುಚ್ಚಲಾಗಿರುವ ಕಾರಣ ಏರ್ ಕೆನಡಾ ವಿಮಾನಗಳನ್ನು ಒಂಟಾರಿಯೊದ ಹ್ಯಾಮಿಲ್ಟನ್‍ಗೆ ಕಳುಹಿಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ಹಲವು ಗಂಟೆಗಳ ಕಾಲ ಟರ್ಮಿನಲ್‍ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ನೀರಿನ ಟ್ಯಾಕ್ಸಿಗಳ ಮೂಲಕ ಸ್ಥಳಾಂತರಿ,ಈ ಪ್ರದೇಶದಲ್ಲಿ ಹಲವಾರು ರಸ್ತೆಗಳನ್ನು ಮುಚ್ಚಲಾಯಿತು ಎಂದು ಟೊರೊಂಟೊ ಮೇಯರ್ ಜಾನ್ ಟೋರಿ ಅವರು ಟ್ವೀಟ್ ಮಾಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2022)

ಈ ಪ್ರದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವವರಿಗೆ ನಂಬಲಾಗದಷ್ಟು ವಿಚ್ಛಿದ್ರಕಾರವಾದ ಸನ್ನಿವೇಶ ಸೃಷ್ಠಿಯಾಗಿದೆ ಅವರ ತಾಳ್ಮೆಗೆ ನಾನು ಧನ್ಯವಾದಗಳು ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ತಿನಿಖೆ ಚುರುಕುಗೊಳಿಸಲಾಗಿದ್ದು ,ವಿಮಾನ ನಿಲ್ದಾಣ ಸಮೀಪ ಬಾಂಬ್ ಪತ್ತೆ ದಳ ಕಾರ್ಯಾಚರಣೆ ನಡೆಸುತ್ತಿದೆ.

Articles You Might Like

Share This Article